ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಆಪ್ತರಿಗೆ ಚುನಾವಣೆ ಸಂದರ್ಭದಲ್ಲಿಯೇ ಐಟಿ ಶಾಕ್ ನೀಡಿದೆ.
ಡಿಕೆ ಸುರೇಶ್ ಅವರ 6 ಜನ ಆಪ್ತರ ಮನೆಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ಕೋಣನಕುಂಟೆಯ ಶ್ರೀಧರ್, ಅಂಜನಾಪುರ ಮಾಜಿ ಕಾರ್ಪೋರೇಟರ್ ಗಂಗಾಧರ್ ಸೇರಿದಂತೆ 6 ಜನರ ಮನೆಗಳ ಮೇಲೆ ದಾಳಿ ನಡೆದಿದೆ. ಗಂಗಾಧರ್ ಮನೆಯ ಮೇಲೆ ದಾಳಿ ನಡೆಸಿದ ವೇಳೆ 87 ಲಕ್ಷ ರೂ. ಸಿಕ್ಕಿದೆ.
ಬಸವನಗುಡಿಯಲ್ಲಿ ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ ವೇಳೆ 22 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಸೇರಿ ವಿವಿಧೆಡೆ ಕಳೆದ 2 ದಿನದಿಂದ ಐಟಿ ಇಲಾಖೆ ನಡೆಸಿದ್ದ ಶೋಧ ಕಾರ್ಯದಲ್ಲಿ, 1.33 ಕೋಟಿ ನಗದು, 23 ಕೆಜಿ ಚಿನ್ನಾಭರಣ, ಬೇನಾಮಿ ಆಸ್ತಿ ಪತ್ರದ ದಾಖಲೆ ವಶಕ್ಕೆ ಪಡೆಯಲಾಗಿದೆ. ಕಮಲೇಶ್ ಜೈನ್ ನಿವಾದಲ್ಲಿ ದಾಖಲೆ ಇಲ್ಲದ 23 ಲಕ್ಷ ನಗದು, 450 ಗ್ರಾಂ ಚಿನ್ನ, 13 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.