ಇಟಲಿಯಲ್ಲಿ ಯುವತಿ ಸಾವಿನ ಬಳಿಕ ಅಸ್ಟ್ರಾಜೆನೆಕಾ ಲಸಿಕೆಗೆ ನಿಷೇಧ..!
ವಿಶ್ವಾದ್ಯಂತ ಕೋವಿಡ್ 2ನೇ ಅಲೆ ನಡುವೆ ಲಸಿಕೆ ಅಭಿಯಾನವೂ ಜಾರಿಯಲ್ಲಿದೆ.. ಈ ನಡುವೆ ಕೆಲವೆಡೆ ಕೆಲ ಲಸಿಕೆಗಳಿಂದ ಜೀವವೂ ಹೋಗಿದೆ.. ಇದೀಗ ಅಸ್ಟ್ರಾಜೆನೆಕಾದ ಕೋವಿಡ್ 19 ಲಸಿಕೆಯನ್ನು ಇಟಲಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ.
ಹೌದು ಯುವತಿಯೊಬ್ಬರು ಲಸಿಕೆ ಪಡೆದ ಬೆನ್ನಲ್ಲೇ ರಕ್ತಹೆಪ್ಪುಗಟ್ಟಿ ಮೃತಪಟ್ಟ ಹಿನ್ನೆಲೆಯಲ್ಲಿ 60 ವರ್ಷದ ಒಳಗಿನವರಿಗೆ ಈ ಲಸಿಕೆ ನೀಡದೇ ಇರುವ ನಿರ್ಧರಾವನ್ನ ಅಲ್ಲಿನ ಸರ್ಕಾರ ತೆಗೆದುಕೊಂಡಿದೆ.
ಮೇ 25ರಂದು ಅಸ್ಟ್ರಾಜೆನೆಕಾದ ಲಸಿಕೆ ಪಡೆದಿದ್ದ ಕ್ಯಾಮಿಲಾ ಕ್ಯಾನೆಪಾ ಎಂಬ ಹೆಸರಿನ 18 ವರ್ಷದ ಯುವತಿಯು ಗುರುವಾರ ಮೃತಪಟ್ಟಿದ್ದಾರೆ. ಆಂಗ್ಲೋ-ಸ್ವೀಡಿಷ್ ಕಂಪನಿಯ ಲಸಿಕೆಯನ್ನು ಆತಂಕಗಳ ಹೊರತಾಗಿಯೂ ಎಲ್ಲಾ ವಯಸ್ಸಿನವರಿಗೆ ಬಳಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಹೀಗಾಗಿ ಇಮ್ಮುಂದೆ ಕೇವಲ 60 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಅಸ್ಟ್ರಾಜೆನೆಕಾದ ಲಸಿಕೆ ನೀಡುವುದಾಗಿ ತಿಳಿಸಿದೆ. ಅಸ್ಟ್ರಾಜೆನೆಕಾದ ಮೊದಲ ಡೋಸ್ ಪಡೆದ 60 ವರ್ಷದೊಳಗಿನ ಜನರಿಗೆ ಎರಡನೇ ಡೋಸ್ ವೇಳೆ ಬೇರೆ ಲಸಿಕೆ ನೀಡುವುದಾಗಿಯೂ ತಿಳಿಸಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.