ರಾಮ ಮಂದಿರದಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಂದು ಹುಟ್ಟಿದ ಅವಳಿ ಮಕ್ಕಳಿಗೆ ಮುಸ್ಲಿಂ ದಂಪತಿ ರಾಮ್, ರಹೀಂ ಎಂದು ಹೆಸರಿಟ್ಟಿದ್ದಾರೆ.
ಫರ್ಜಾನಾ ಎಂಬ ಮಹಿಳೆ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಜಿಲ್ಲಾ ಮಹಿಳಾ ಆಸ್ಪತ್ರೆಯ ಪ್ರಭಾರಿ ಡಾ.ನವೀನ್ ಜೈನ್ ತಿಳಿಸಿದ್ದಾರೆ. ಸದ್ಯ ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಮಗುವಿನ ಅಜ್ಜಿ ಹುಸ್ನಾ ಬಾನು ಅವರಿಗೆ ರಾಮ್ ರಹೀಂ ಎಂದು ಹೆಸರಿಸಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಹಿಂದೂ-ಮುಸ್ಲಿಂ ಏಕತೆಯ ಸಂದೇಶ ನೀಡಲು ಮಗುವಿಗೆ ರಾಮ್ ರಹೀಂ ಎಂದು ಹೆಸರಿಟ್ಟಿದ್ದೇನೆ ಎಂದು ಬಾನು ಹೇಳಿದ್ದಾರೆ. ರಾಮಲಲ್ಲಾ ಪ್ರಾಣ ಪ್ರತಿಷ್ಠೆ ದಿನದಂದು ಹುಟ್ಟಿದ ಮಕ್ಕಳಿಗೆ ರಾಘವ್, ರಾಘವೇಂದ್ರ, ರಘು ಮತ್ತು ರಾಮೇಂದ್ರರಂತಹ ಭಗವಾನ್ ರಾಮನ ಹೆಸರುಗಳನ್ನೇ ಹೆಚ್ಚಾಗಿ ಇಟ್ಟಿದ್ದಾರೆ.