ಆಕ್ಷನ್ ಹೀರೋ ಜಾಕಿ ಚಾನ್ ರಾಜಕೀಯ ಪ್ರವೇಶ..

1 min read

ಆಕ್ಷನ್ ಹೀರೋ ಜಾಕಿ ಚಾನ್ ರಾಜಕೀಯ ಪ್ರವೇಶ..!

ಚೀನಾ :  ಹಾಲಿವುಡ್ ನಲ್ಲಿ ಬ್ರೂಸ್ಲಿ  ಹೋಲುವ ರೀತಿಯಲ್ಲಿಯೇ ಆಕ್ಷನ್ ಕಿಂಗ್ ಎನಿಸಿಕೊಂಡಿರುವ ಹಾಂಕಾಂಗ್ ಮೂಲದ ನಟ ಜಾಕಿ ಚಾನ್ ಬಗ್ಗೆ ಗೊತ್ತಿಲ್ಲದವರು ಬಹುಶಃ ಇಲ್ಲ.. ಅನೇಕ ಆಕ್ಷನ್ ಸಿನಿಮಾಗಳಲ್ಲಿ ನಟಿಸಿ ವಿಶ್ವಾದ್ಯಂತ ಚಿರಪರಿಚಿತವಾಗಿರುವ ಜಾಕಿ ಚಾನ್ ಈಗ ರಾಜಕೀಯ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಹೌದು ಕಳೆದ ವಾರ ನಡೆದ ವಿಚಾರ ಸಂಕೀರಣದಲ್ಲಿ ಮಾತನಾಡಿದ ಅವರು, ಆಡಳಿತರೂಢ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಜುಲೈ 1 ರಂದು ಪಕ್ಷದ ಶತಮಾನೋತ್ಸವ ಸಮಾರಂಭದಲ್ಲಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಮಾಡಿದ ಪ್ರಧಾನ ಭಾಷಣದ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಸಂದರ್ಭದಲ್ಲಿ ರಾಜಕೀಯ ಸೇರುವ ಬಗ್ಗೆ ಜಾಕಿ ಚಾನ್ ಹೇಳಿಕೊಂಡಿದ್ಧಾರೆ.

ಚೀನಾ ಫಿಲ್ಮ್ ಅಸೋಸಿಯೇಷನ್‍ ನ ಉಪಾಧ್ಯಕ್ಷರೂ ಆಗಿರುವ ಜಾಕಿ ಚಾನ್, ಸಿಪಿಸಿಯ ಹಿರಿಮೆಯನ್ನು ನಾನು ನೋಡಬಲ್ಲೆ. ಪಕ್ಷ ಹೇಳಿದ್ದನ್ನು ಮಾಡಿ ತೋರಿಸಿದೆ. 100 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ತಾನು ನೀಡಿದ ಭರವಸೆಯನ್ನು ಕೆಲವೇ ದಶಕಗಳಲ್ಲಿ ಈಡೇರಿಸಿದೆ. ಹೀಗಾಗಿ ನಾನು ಸಿಪಿಸಿ ಸದಸ್ಯನಾಗಬೇಕೆಂಬ ಆಸೆಯಿದೆ ಎಂದು ಹೇಳಿದರು.

2019ರಲ್ಲಿ ಮಾತನಾಡಿದ್ದ ಜಾಕಿ ಚಾನ್, ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಾನು ಹೇಳಬಲ್ಲೆ. ನಾನು ಹೋದ ಕಡೆ ಎಲ್ಲ ನಾನು ಚೈನೀಸ್ ಎಂದು ಹೇಳಲು ಹೆಮ್ಮೆ ಆಗುತ್ತಿದೆ. ಐದು ನಕ್ಷತ್ರಗಳ ಕೆಂಪು ಧ್ವಜವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹಾಂಕಾಂಗ್ ಹೋರಾಟವನ್ನು ವಿರೋಧಿಸಿ ಈ ಹಿಂದೆ ಜಾಕಿ ಚಾನ್ ಮಾತನಾಡಿದ್ದರು. ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹಾಂಕಾಂಗ್ ಮತ್ತು ಚೀನಾ ನನ್ನ ಜನ್ಮಸ್ಥಳ ಮತ್ತು ನನ್ನ ಮನೆ ಇದ್ದಂತೆ. ಚೀನಾ ನನ್ನ ದೇಶ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ನನ್ನ ಮನೆಯನ್ನು ಪ್ರೀತಿಸುತ್ತೇನೆ. ಹಾಂಕಾಂಗ್‍ ನಲ್ಲಿ ಶೀಘ್ರ ಶಾಂತಿ ನೆಲಸಬಹುದು ಎಂದು ಭಾವಿಸುತ್ತೇನೆ ಎಂದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd