ಈ ತಲೆ ಮಾರಿನ ಯುವ ಪ್ರತಿಭೆಗಳಿಗೆ ದೇವರೆ ದಿಕ್ಕು : ಜಗ್ಗೇಶ್
ಬೆಂಗಳೂರು : ಬೇರೆ ಭಾಷಿಕರಿಗಿಂತ ನಮ್ಮಲ್ಲಿ ಭಾಷಾಭಿಮಾನ ಕಡಿಮೆ ಎಂಬ ದರ್ಶನ್ ಹೇಳಿಕೆಗೆ ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸತ್ಯ.!! ಅಂದು ನಾನಾಡಿದ ಮಾತು ಕನ್ನಡಿಗರೆ ಸ್ವಾಭಿಮಾನಿಯಾಗಿ!ಕನ್ನಡಕ್ಕೆ ಮೊದಲು ಕೈಯತ್ತಿ ನಿಮ್ಮ ಕೈ ಕಲ್ಪವೃಕ್ಷವಾಗುತ್ತೆ ಎಂದು!ನನ್ನಭಾವನೆ ಅರ್ಥವಾಗದೆ ಸಮಯಸಾಧಕರು ಜಾಗೃತರಾಗಿ ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು!ಕೆಲವರು ನಂಬಿದರು!ನನ್ನಪ್ರಾಮಾಣಿಕ ನುಡಿಗಳ ಸತ್ಯ ನಿಧಾನವಾಗಿ ಅರಿವಾಗುತ್ತೆ ದೌರ್ಭಾಗ್ಯ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ನಮ್ಮ ಹಾರ್ಟ್ ದೊಡ್ಡದು, ಊರ ಅಗಲ ಇದೆ ಕನ್ನಡಿಗರ ಹೃದಯ ಹಾಗಾಗಿ ಎಲ್ಲಾ ಭಾಷಯ 600ಕ್ಕಿಂತ ಹೆಚ್ಚಿನ ಸಿನಿಮಾಗಳನ್ನು ನಮ್ಮವರು ನೋಡುತ್ತಾರೆ. ಹೀಗಾಗಿ ಇಂಥಹ ಸ್ಪರ್ಧೆಯಲ್ಲಿ ನಾವು ಉಳಿಯುವುದು ಕಷ್ಟ ಎಂದು ಈ ಹಿಂದೆ ಹೇಳಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ, ನಾನು 40ವರ್ಷ ಉಳಿದು ಗೆದ್ದು ಗಳಿಸಿ ಕನ್ನಡದ ಹೃದಯದಲ್ಲಿ ನಾನು ಸತ್ತಮೇಲು ಅಳಿಸಲಾಗದ ಜಗ್ಗೇಶನ ಮುದ್ರೆ ಒತ್ತಿಯಾಯಿತು! ಕಷ್ಟ ಇರುವುದು ಬರುವುದು ಮುಂದಿನ ಪೀಳಿಗೆಯ ಯುವ ಆತ್ಮಗಳಿಗೆ! ಈ ತಲೆಮಾರಿನ ಯುವ ಪ್ರತಿಬೆಗಳಿಗೆ ದೇವರೆ ದಿಕ್ಕು ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel