ಸ್ಯಾಂಡಲ್ ವುಡ್ ನ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ಹೊಸ ಕಾರು ಖರೀದಿ ಮಾಡಿದ್ದಾರೆ..
ಹೊಸ ಕಾರಿನ ಫೋಟೋವನ್ನು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..
ನಾಯಕನಾಗಿ, ಹಾಸ್ಯ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಜಗ್ಗೇಶ್ ಹೊಸ ಕಾರು ಖರೀದಿಸಿದ್ದರೆ. ಇತ್ತೀಷೆಗಷ್ಟೇ ಜಗ್ಗೇಶ್ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದರು. ಈಗ ಮತ್ತೊಂದು ಕಾರು ಖರೀದಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈಟ್ ಕಲರ್ ಕಾರಿನ ಫೋಟೋವನ್ನು ಜಗ್ಗೇಶ್ ಶೇರ್ ಮಾಡಿದ್ದಾರೆ.
ಶುಭ ಶುಕ್ರವಾರ ರಾಯರ ಮಠದಲ್ಲಿ ನನಗೆ ನೀಡಿದ ಪ್ರಸಾದ ಅವರಿಗೆ ನೈವೇದ್ಯದಂತೆ ಅರ್ಪಿಸಿ ಮನೆಗೆ ತಂದೆ. ರಾಯರ ಕೃಪೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.