ರಾಯರ ಪವಾಡದಿಂದ ತಮ್ಮ ಬದುಕು ಬದಲಾದ ಬಗ್ಗೆ ಜಗ್ಗೇಶ್ ಮಾತು..!
ಬೆಂಗಳೂರು : ನವರಸ ನಾಯಕ ಜಗ್ಗೇಶ್ ಅವರು ರಾಯರ ಮಹಾಭಕ್ತರು ಅನ್ನೋ ವಿಚಾರ ಎಲ್ರಿಗೂ ಗೊತ್ತಿದೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಮಂತ್ರಾಲಯ, ರಾಘವೇಂದ್ರ ಸ್ವಾಮಿಗಳ ಫೋಟೋಗಳು ಹಾಗೂ ಜಗ್ಗೇಶ್ ಅವರ ಮೇಲೆ ರಾಯರ ಕೃಪೆಯ ಬಗ್ಗೆ ಪೋಸ್ಟ್ ಗಳನ್ನ ಹಾಕುತ್ತಾ ತಾವು ನಡೆದು ಬಂದಿರು ಹಾದಿ, ಅನುಭವಗಳನ್ನ ಜಗ್ಗೇಶ್ ಹಂಚಿಕೊಳ್ತಿರುತ್ತಾರೆ.
ಇದೀಗ ಜಗ್ಗೇಶ್ ಅವರ ಜೀವನದಲ್ಲಿ ರಾಯರು ಮಾಡಿರುವ ಪವಾಡಗಳ ಕುರಿತಾಗಿ ಹಂಚಿಕೊಂಡಿದ್ದಾರೆ. 1980ರಲ್ಲಿ ಮಂತ್ರಾಲಯ ತುಂಗಾ ತೀರದ ಬಂಡೆಯ ಮೇಲೆ ಏಕಾಂಗಿ. ಆಗ ಮನದಲ್ಲಿ ಗುನುಗುತ್ತಿದ್ದ ಹಾಡು ನನ್ನವರಾರೂ ನನಗಿಲ್ಲ. ನೀನಲ್ಲದೇ ಬೇರೆ ಗತಿ ಇಲ್ಲ. ನನ್ನಲಿ ಏಕೆ ಕೃಪೆ ಇಲ್ಲ. ಗುರುರಾಯನೆ ನೀನೇ ನನಗೆಲ್ಲ. ರಾಯರಲ್ಲಿ ಅಂದಿನ ನನ್ನ ಬೇಡಿಕೆ ಒಂದೇ. ಮಡದಿಯಾಗಿ ಪರಿಮಳಾ ಬೇಕು, ವೃತ್ತಿಯಾಗಿ ಕಲಾರಂಗಬೇಕು ಎಂದು, ಬೇಡಿದ ಈ ವರಗಳನ್ನು ರಾಯರು ಕರುಣಿಸಿದರು ಎಂದು ಬರೆದುಕೊಂಡಿದ್ದಾರೆ.
40 ವರ್ಷ ಹಿಂದೆ ತಿರುಗಿ ಈ ಚಿತ್ರ ನೋಡಿದಾಗ ರಾಯರ ಪವಾಡ ನನ್ನ ಬದುಕಿನ ವಿಸ್ಮಯ. ಮಾಯಸಂದ್ರವೆಲ್ಲಿ, ಚಿತ್ರರಂಗವೆಲ್ಲಿ. ಈಶ್ವರ ಗೌಡ ಜಗ್ಗೇಶ್ ಆದದ್ದೆಲ್ಲಿ. ಅರ್ಪಣಾಭಾವದಿಂದ ನಂಬಿದರೆ ರಾಯರು ಬೃಂದಾವನದಿಂದ ತಾಯಂತೆ ಎದ್ದುಬಂದು ಹರಸುವರು. ಗುರುಭ್ಯೋ ನಮಃ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
https://www.instagram.com/p/CVWsf2Fvh4H/?utm_source=ig_embed&ig_rid=0973fea9-d642-4b75-afd9-69bcc204cda2
ಟೀಸರ್ ನಿಂದಲೇ ಜನರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ ‘ಸಖತ್’ ಟೀಸರ್.!








