ಟೀಸರ್ ನಿಂದಲೇ ಜನರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ ‘ಸಖತ್’ ಟೀಸರ್.!
ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಅಂದ್ರೆ ಆ ಸಿನಿಮಾ ಪಕ್ಕಾ ಕಾಮಿಡಿ , ವಿಭಿನ್ನ ಸ್ಟೋರಿ ಲೈನ್ ಇಲ್ಲ ಲವ್ ಸ್ಟೋರಿ ಆಗಿರುತ್ತೆ ಅನ್ನೋದು ಜನರ ಗೆಸ್ಸಿಂಗ್. ಆ ಗೆಸ್ಸಿಂಗ್ ಸಿನಿಮಾ ತೆರೆಗೆ ಬಂದ್ ಮೇಲೆ 100% ಪಕ್ಕಾ ಅಂತನೂ ಅನ್ಸುತ್ತೆ. ಗೋಲ್ಡನ್ ಸ್ಟಾರ್ ಗಣೇಶ್ ಕಾಮಿಡಿ ಮಾಡುತ್ತಾ, ಲವರ್ ಬಾಯ್ ಇಮೇಜ್ ನಲ್ಲಿ ತಮ್ಮದೇ ಶೈಲಿನಲ್ಲಿ ಡೈಲಾಗ್ಸ್ ಗಳನ್ನ ಹೊಡೆಯುತ್ತಾ ಜನರನ್ನ ರಂಜಿಸುತ್ತಾರೆ. ವಿಭಿನ್ನ ಅಭಿಮಾನಿಗಳ ಬಳಗ ಹೊಂದಿದ್ದಾರೆ.
ಇದೀಗ ಪಕ್ಕಾ ಕಾಮಿಡಿ ಎಂಟರ್ ಟೈನ್ ಸಿನಿಮಾ ಮೂಲಕ ಜನರನ್ನ ನಕ್ಕಿ ನಗಿಸೋಕೆ ರೆಡಿಯಾಗಿರೋ ಮಳೆ ಹುಡುಗ ‘ಸಖತ್’ ಆಗಿ ಬೆಳ್ಳಿ ತೆರೆಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹೌದು.. ಗಣೇಶ್ ನಟನೆಯ ಸಖತ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರನ್ನ ಸಖತ್ ಎಂಟರ್ ಟೈನ್ ಮಾಡ್ತಿದೆ. ಟೀಸರ್ ನೋಡಿದ ಜನರೆಲ್ಲಾ ಇದೊಂದು ಪಕ್ಕಾ ಕಾಮಿಡಿ ಎಂಟರ್ ಟೈನ್ ಮೆಂಟ್ ಅಂತ ಫಿಕ್ಸ್ ಆಗಿದ್ದು, ಸಿನಿಮಾಗೆ ವಿಶ್ ಮಾಡ್ತಾಯಿದ್ದಾರೆ.
ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಣ್ಣಿಲ್ಲದವರಂತೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಆಗಾಗ ಕಾಮಿಡಿ ಪಂಚಿಂಗ್ ಡೈಲಾಗ್ಸ್ ಗಳನ್ನ ಹೊಡೆಯುತ್ತಾರೆ. ಬಹುತೇಕ ಟೀಸರ್ ನಲ್ಲಿ ಗಣೇಶ್ ನ್ಯಾಯಾಲಯದ ಕಟಕಡೆಯಲ್ಲಿ ನಿಂತಿರುವುದನ್ನ ತೋರಿಸಲಾಗಿದ್ದು, ಸಿನಿಮಾ ಪ್ಲಾಟ್ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಕೂಡ ಇದೆ. ಇದೇ ಮೊದಲ ಬಾರಿಗೆ ಗಣೇಶ್ ಅಂಧರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಜೊತೆ ಸಸ್ಪೆನ್ಸ್ ಥ್ರಿಲ್ಲರ್ ಎಲಿಮೆಂಟ್ಸ್ ಜೊತೆಗೆ ಒಂದಷ್ಟು ಒಂದಷ್ಟು ಟ್ವಿಸ್ಟ್ ಕೂಡ ಇರಬಹುದು ಅನ್ನೋದನ್ನ ಟೀಸರ್ ನೋಡಿಯೇ ಅಂದಾಜಿಸಬಹುದು.
ಗಣೇಶ್ ಜೊತೆಗೆ ಸಾಧು ಕೋಕಿಲ ಕಾಮಿಡಿ ಕೂಡ ಸಿನಿಮಾದಲ್ಲಿ ನೋಡೋಕೆ ಸಿಗಲಿದೆ. KVN ಪ್ರೊಡಕ್ಷನ್ ಬ್ಯಾನರ್ ನ ಅಡಿ ಮೂಡಿ ಬಂದಿರುವ ಸಿನಿಮಾಗೆ
ನಿಶಾ ವೆಂಕಟ್ ಕೋಣಂಕಿ – ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ. ಜುದಾ ಸ್ಯಾಂಡಿ ಸಂಗೀತವಿದೆ.ಗಣೇಶ್ ಜೊತೆಗೆ ಸುರಭಿ ಪುರಾನಿಕ್ ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.