ಗದಗ : ದೇಶದಲ್ಲಿ ಕೊರೊನಾ ವೈರಸ್ ನ ರುದ್ರತಾಂಡವ ಮುಂದುವರಿದಿದೆ. ಲಾಕ್ ಡೌನ್ ನಡುವೆಯೂ ಜನರು ಹೊರಗಡೆ ಬರೋದು ಬಿಡ್ತಿಲ್ಲ. ಲಾಕ್ ಡೌನ್ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಮನವಿ ಮಾಡುತ್ತಲೇ ಇದ್ದಾರೆ. ಆರಂಭದಲ್ಲಿ ಲಾಠಿ ಹಿಡಿದು ಫೀಲ್ಡಿಗಿಳಿದಿದ್ದ ಪೊಲೀಸರು ಇದೀಗ ವಿಭಿನ್ನ ರೀತಿಯಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
https://www.facebook.com/parameshwar.kawatagi/videos/2639505719505204/
ಗದಗದಲ್ಲಿ ಜಾನಪದ ಹಾಡಿನ ಮೂಲಕ ಪೊಲೀಸರು ಜನರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಗದಗ ಜಿಲ್ಲೆಯ ನಗರ ಪೊಲೀಸ್ ಕಚೇರಿ ಪಿಎಸ್‌ಐ ಯಲ್ಲಪ್ಪ ವಡಗೇರಿ, ಜಾನಪದ ಶೈಲಿಯಲ್ಲಿ ಕೊರೊನಾ ಜಾಗೃತಿ ಗೀತೆ ಹಾಡಿದ್ದಾರೆ. ಭಯಪಡದಿರಿ ಈ ಮಾರಿಗೆ… ಭಯ ಪಡದಿರಿ ಈ ಕೊರೊನಾಕೆ… ಎಂಬ ಶೀರ್ಷಿಕೆಯಡಿ ಸ್ವತಃ ತಾವೇ ಸಾಹಿತ್ಯ ರಚಿಸಿದ್ದಾರೆ.








