ಕಮಲ ಕುಮಾರಿಯಿಂದ ಜಯಂತಿಯಾಗಿ … ಅಭಿನಯ ಶಾರದೆಯಾಗುವವರೆಗಿನ ಸಿನಿಮಾ ಹಾದಿ..!

1 min read

ಕಮಲ ಕುಮಾರಿಯಿಂದ ಜಯಂತಿಯಾಗಿ … ಅಭಿನಯ ಶಾರದೆಯಾಗುವವರೆಗಿನ ಸಿನಿಮಾ ಹಾದಿ..!

ಚಂದನವನದ ಹಿರಿಯ ಸ್ಟಾರ್ ನಟಿ , ಅಭಿನಯ ಶಾರದೆ ಜಯಂತಿ ವಿಧಿವಶರಾಗಿದ್ದಾರೆ. 76 ವರ್ಷ ವಯಸ್ಸಾಗಿದ್ದ ಜಯಂತಿ ಅವರು ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ದಕ್ಷಿಣ ಬಾರತದಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದ ಜಯಂತಿ ಅವರು , ಕನ್ನಡ , ತಮಿಳು , ತೆಲುಗು , ಮಳಯಾಳಂ , ಹಿಂದಿ, ಮಳಯಾಳಂ ಹೀಗೆ ಬಹುತೇಕ ಬಾಷೆಗಳಲ್ಲಿ ಮಿಂಚು ಹರಿಸಿ ಅಭಿನಯ ಶಾರದೆ ಎಂದೇ ಖ್ಯಾತಿ ಗಳಿಸಿದ್ದರು.
1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್ನಲ್ಲಿ ಬೆಳೆದರು.

ಕನ್ನಡ ನಿರ್ದೇಶಕ ವೈ.ಆರ್.ಪುಟ್ಟಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನು ನೋಡಿ ತಮ್ಮ `ಜೇನು ಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಇದು ಜಯಂತಿ ಅವರ ಜೀವನವನ್ನೇ ಬದಲಾಯಿಸಿಬಿಟ್ಟಿತು.. ಪುಟ್ಟಸ್ವಾಮಿ ಅವರು ಕಮಲಾ ಕುಮಾರಿಗೆ ಜಯಂತಿ ಎಂದು ಮರುನಾಮಕರಣ ಮಾಡಿದರು.. ಇಲ್ಲಿಂದ ಜಯಂತಿ ಅವರ ಸ್ಟಾರ್ ಚೇಂಜ್ ಆಯಿತು.. ಸದ್ಯ ಇಂತಹ ಮೇರು ನಟಿ ನಿಧನಕ್ಕೆ ಸ್ಯಾಂಡಲ್ ವುಡ್ ತಾರೆಯರು ವಿವಿಧ ಕ್ಷೇತ್ರಗಳ ಗಣ್ಯರು , ಆಪ್ತರು , ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

1960 ರಿಂದ 1980ರ ದಶಕದವರೆಗೂ ದಕ್ಷಿಣ ಬಾರತ ಸಿನಿಮಾರಂಗದ ಬಹುಬೇಡಿಕೆಯ ನಟಿಯಾಗಿದ್ದ ಜಯಂತಿ ಅವರು ಕನ್ನಡದಲ್ಲಿಯೇ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಜಯಂತಿಯವರು ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಜಯಂತಿಯವರದ್ದು.

ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ಚಿತ್ರರಂಗಕ್ಕೆ ಬಂದ ನಂತರ ಜಯಂತಿಯಾದರು. ಜಯಂತಿಯವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ವೈ ಆರ್ ಪುಟ್ಟಸ್ವಾಮಿಯವರ ‘ಜೇನುಗೂಡು’ ಚಿತ್ರದ ಮೂಲಕ. ಅಲ್ಲಿಂದಲೇ ಕಮಲಾ ಕುಮಾರಿ ಜಯಂತಿಯಾಗಿದ್ದು. ಕನ್ನಡ ಚಿತ್ರರಂಗದಲ್ಲೆ ಮೊದಲ ಬಾರಿಗೆ ಬಿಕಿನಿ ತೊಟ್ಟು ಸುದ್ದಿಯಾಗಿದ್ದ ನಟಿ ಜಯಂತಿಯವರು. ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿದ್ದಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದರು.

ಒನಕೆ ಓಬವ್ವನ ಹಾಡಿನಲ್ಲಿ ಜಯಂತಿಯವರ ಅಭಿನಯ ಇಂದಿಗೂ ಜನಪ್ರಿಯ. ನಟಿ ಜಯಂತಿ, 6 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. 1965 ಮಿಸ್ ಲೀಲಾವತಿ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. 1969 – ಎರಡು ಮುಖ, 1976 – ಮನಸ್ಸಿನಂತೆ ಮಾಂಗಲ್ಯ, 1976 – ಧರ್ಮ ದಾರಿ ತಪ್ಪಿತು, 1985 – ಮಸಣದ ಹೂವು , 1989 – ಆನಂದ್ ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.

ಕಮಲಾ ಕುಮಾರಿ , ಜಯಂತಿಯಾಗಿ ಸ್ಟಾರ್ ಪಟ್ಟ ಸಿಕ್ಕ ಹಾದಿ..!

ನಟಿಯಾಗುವ ಮುನ್ನ ಜಜಯಂತಿ ಅವರು ಅನೇಕ ಕಠಿಣ ಪರಿಸ್ಥಿತಿಗಳನ್ನ ಎದುರಿಸಿದ್ದಾರೆ. ಅಭಿನಯ ಶಾರದೆಯಾಗುವ ಹಿಂದೆ ಸಾಕಷ್ಟು ಶ್ರಮವಿದೆ.. ಬಾಲ್ಯದಲ್ಲಿ ಆಕೆ ತನ್ನ ನೆಚ್ಚಿನ ನಟ ಎನ್ ರಾಮಾ ರಾವ್ ಅವರನ್ನ ನೋಡಲು ಸ್ಟುಡಿಯೋಗೆ ಹೋಗಿದ್ದಾಗ ಎನ್ ಟಿ ಆರ್ ಜಯಂತಿ ಅವರನ್ನ ಕರೆದು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡಿದ್ದರಂತೆ.. ಅಲ್ಲದೇ ಆಗ ಆ ಪುಟ್ಟ ಬಾಲಕಿ ( ಜಯಂತಿ ) ಅವರನ್ನ ತಮ್ಮ ಸಿನಿಮಾಗೆ ನಾಯಕಿಯಾಗುವೆಯ ಎಂದು ಪ್ರೀತಿಯಿಂದ ಕೇಳಿದ್ದರಂತೆ. ತಾಯಿಯ ಆಸೆಯಂತೆ ನೃತ್ಯಾಭ್ಯಾಸ ಮಾಡುತ್ತಿದ್ದ ಜಯಂತಿ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.. ಆರಂಭದಲ್ಲಿ ಸರಿಯಾಗಿ ಡ್ಯಾನ್ಸ್ ಮಾಡುವುದಕ್ಕೆ ಕಷ್ಟದ ಪಟ್ಟಿದ್ದರಂತೆ.. ಟೀನೇಜ್ ನಲ್ಲಿದ್ದಾಗಲೇ ಕೆಲ ತಮಿಳು , ತೆಲುಗು ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಜಯಂತಿ ಕಾಣಿಸಿಕೊಂಡಿದ್ದಾರೆ. ಆದ್ರೆ ಆಗಲೂ ಸಾಕಷ್ಟು ನಿರಾಸೆಗಳನ್ನ ಅನುಭವಿಸಿದ್ದ ಜಯಂತಿ ಅವರು ಛಲ ಬಿಡದೇ ಮುಂದೆ ನಾನೂ ನನ್ನ ಪ್ರತಿಭೆಯಿಂದ ಗೆದ್ದೇ ಗೆಲ್ತೇನೆ.. ಸ್ಟಾರ್ ಆಗ್ತೀನಿ ಅನ್ನೋ ಆತ್ಮವಿಶ್ವಾಸದಲ್ಲಿ ಮತ್ತಷ್ಟು ಪ್ರಯತ್ನಗಳನ್ನ ಮಾಡಿದರು.

ಬಳಿಕ ನಿರ್ದೇಶಕ ವೈ ಆರ್ ಸ್ವಾಮಿ ಅವರನ್ನ ಭೇಟಿಯಾದ ನಂತರ ಜಯಂತಿ ಅವರ ಬದುಕೆ ಬದಲಾಗಿಹೋಯ್ತು. ” ಜೇನು ಗೂಡು ಸಿನಿಮಾ ಮೂಕ” ಕಮಲಾ ಕುಮಾರಿ ಚಂದನವನದ . ಚಿತ್ರರಂಗದ ಜಯಂತಿಯಾಗಿ ಬದಲಾದರು.. ಅವರಿಗೆ ಜಯಂತಿ ಒಹೆಸರು ಕೊಟ್ಟಿದ್ದು, ಅವರ ವೃತ್ತಿ ಜೀವನ ಬದಲಾಗುವುದಕ್ಕೆ ಮೈಲುಗಲ್ಲಾದವರು ವೈ ಆರ್ ಸ್ವಾಮಿ.. ಇದಾದ ಬಳಿಕ ಜಯಂತಿ ಮತ್ತೆ ಹಿಂದಿರುಗಿ ನೋಡಿಲ್ಲ.. ಸಾಲು ಸಾಲು ಸಿನಿಮಾಗಳಲ್ಲಿ ಎಲ್ಲಾ ರೀತಿಯಾದ ಪಾತ್ರಗಳಲ್ಲೂ ನಟಿಸಿ ಆ ಪಾತ್ರಗಳಿಗೆ ಜೀವ ತುಂಬಿ ನ್ಯಾಯ ಒದಗಿಸಿದ್ದಾರೆ.. ವರನಟ ಡಾ. ರಾಜ್ ಕಕುಮಾರ್ ಹಾಗೂ ಜಯಂತಿಯ ಜೋಡಿ ಆಗಿನ ಅಭಿಮಾನಿಗಳ ಪಾಲಿನ ಫೇವರೇಟ್ ಜೋಡಿ ಕೂಡ ಆಗಿತ್ತು.. ಇದೇ ಅಭಿಮಾನ , ಈ ಜೋಡಿಯ ಕ್ರೇಜ್ ನಿಂದಾಗಿ ಜಯಂತಿ ಅವರು ಸುಮಾರು 45 ಸಿನಿಮಾಗಳಲ್ಲಿ ಅಣ್ಣವ್ರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ..

ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದ ಜಯಂತಿ ಅವರು ಟಿವಿ ಸಿಂಗ್ ಅವರ ಸಾರಥ್ಯದ ಚಂದವಳ್ಳಿಯ ತೋಟದಲ್ಲಿ ಸಿನಿಮಾದಲ್ಲಿ ನಟಿಸಿದರು. ಇದು ಅವರ 2ನೇ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ವರನಟನ ಜೊತೆಗೆ ನಾಯಕಿಯಾಗಿ ಜಯಂತಿ ಬಣ್ಣ ಹಚ್ಚಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಅಲ್ಲದೇ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕೂಡ ಲಭ್ಯವಾಗಿತ್ತು..

ನಂತರ ಮುಂದೆ ಹೆಚ್ಚು ಯಶಸ್ಸು ತಂದು ಕೊಟ್ಟ ಸಿನಿಮಾ 1965 ರಲ್ಲಿ ತೆರೆಕಂಡ ಮಿಸ್ ಲೀಲಾವತಿ. ವಿಟ್ಟಶಲ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಜಯಂತಿ ಅವರು ಅಲ್ಪ ಕಾಲಾವಧಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೂ , ಅವರ ಪಾತ್ರ ಸಾಕಷ್ಟು ಪ್ರಭಾವ ಬೀರಿತ್ತು.. ಅಷ್ಟೇ ಅಲ್ಲ ಗ್ಲಾಮರ್ ದೀವಾ ಅನ್ನುವ ಪಟ್ಟ ಪಡೆದ ಜಯಂತಿ ನೈಟೀಸ್ , ಟಿ ಶರ್ಟ್ , ಸ್ವಿಮ್ ಶೂಟ್ಸ್ ಬಟ್ಟೆ ತೊಟ್ಟು ಮಿಂಚಿದ್ದರು.. ಅಲ್ಲದೇ ಮಿಒದಲ ಬಾರಿಗೆ ಆನ್ ಸ್ಕ್ರೀತನ್ ನಲ್ಲಿ ಸ್ವಿಮ್ ಶೂಟ್ ಧರಿಸಿದ ಮೊದಲ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರೂ.. ಆನಂತರದಿಂದ ಸಿನಿಮಾರಂಗದ ನಟಿಯರ ಮಧ್ಯೆ ಹೊಸ ಸೆನ್ಷೇಷನ್ ಶುರುವಾಗಿತ್ತು..

ಇನ್ನೂ ಜಯಂತಿ ಅಭಿನಯದ ತುಂಬಿದ ಕೊಡ , ಪತಿಯೇ ದೈವ , ದೇವ ಮಾನವ , ಕಿಲಾಡಿ ರಂಗ , ನಕ್ಕರೆ ಅದೇ ಸ್ವರ್ಗ , ದೇವರ ಗೆದ್ದ ಮಾನವ , ರೌಡಿ ರಂಗಣ್ಣ , ಭಲೇ ಬಸವ , ಎರೆಡು ಮುಖ , ಎಡಕಲ್ಲು ಗುಡ್ಡದ ಮೇಲೆ , ತಮಿಳಿನ ಕಾಲೈ ಕೋವಿಲ್ , ತೆಲುಗಿನ ಭಾರ್ಯ ಭರ್ತಲು , ಹಿಂದಿಯ ತೀನ್ ಬಹುರಾಣಿಯಾ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಜಜಯಂತಿ ಅವರು ಅಭಿನಯಿಸಿದ್ದಾರೆ.. ತಮ್ಮ ಅಪ್ರತಿಮ ಅಭಿನಯಕ್ಕೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.. ಇಂತಹ ಮೇರು ನಟಿಯನ್ನ ಕನ್ನಡ ಸಿನಿಮಾರಂಗವು ಕಳೆದುಕೊಂಡಿದೆ.. ಜಯಂತಿ ಅವರ ನಿಧನಕ್ಕೆ ಚಂದನವನವಷ್ಟೇ ಅಲ್ದೇ ದಕ್ಷಿಣ ಭಾರತ ಸಿನಿಮಾರಂಗವೇ ಕಂಬನಿ ಮಿಡಿಯುತ್ತಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd