ಮರಕ್ಕೆ ಜೀಪ್ ಡಿಕ್ಕಿ : ಎಎಸ್ ಐ, ಕಾನ್ಸ್ ಟೇಬಲ್ ಸಾವು
ಮೈಸೂರು : ಮರಕ್ಕೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಎಎಸ್ ಐ ಮತ್ತು ಕಾನ್ಸ್ ಟೇಬಲ್ ಮೃತಪಟ್ಟಿರುವ ಘಟನೆ ಮೈಸೂರಿನ ಕೆ.ಆರ್ ನಗರದಲ್ಲಿ ನಡೆದಿದೆ.
ಕೆ.ಆರ್. ನಗರ ಪೊಲೀಸ್ ಠಾಣೆಯ ಎಎಸ್‍ಐ ಮೂರ್ತಿ ಹಾಗೂ ಜೀಪ್ ಚಾಲಕ ಕಾನ್ಸ್‍ಟೇಬಲ್ ಶಾಂತಕುಮಾರ್ ಮೃತ ಪೊಲೀಸರಾಗಿದ್ದಾರೆ.
ಇಂದು ನಸುಕಿನ ಜಾವ 3 ಗಂಟೆ ಸಮಯದಲ್ಲಿ ಈ ಘಟನೆ ನಡೆಸಿದೆ. ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಎಸ್ ಐ ಮೂರ್ತಿ ಮತ್ತು ಕಾನ್ಸ್‍ಟೇಬಲ್ ಶಾಂತಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕುಡುಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ದೇವರ ಬಸಪ್ಪ..!
ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಎಸ್ ಪಿ ರಿಷ್ಯಂತ್, ಸೌತ್ ಡಿವೈಎಸ್ಪಿ ಸುಮಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತರ ಶವಗಳನ್ನು ಕೆ.ಆರ್. ನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel