ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ , ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಜೈಶ್ – ಉಲ್-ಹಿಂದ್ ಕೈವಾಡ..!

1 min read

Mukesh Ambani

ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ , ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಜೈಶ್ – ಉಲ್-ಹಿಂದ್ ಕೈವಾಡ..!

ಮುಂಬೈ: ಏಷ್ಯಾದ ಶ್ರೀಮಂತ ರಿಲಾಯನ್ಸ್ ಒಡೆಯ ಮುಖೇಶ್ ಅಂಬಾನಿ ಮನೆಯ ಸಮೀಪ ಎಸ್ ಯುವಿ ಕಾರಿನಲ್ಲಿ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಈ ಸುದ್ದಿ ಸದ್ಯ ಸಂಚಲನ ಸೃಷ್ಟಿ ಮಾಡಿತ್ತು. ಅಲ್ಲದೇ ಸ್ಫೊಟಕಗಳು ಪತ್ತೆಯಾದ ಕಾರಿನಲ್ಲಿ ಪತ್ರ ಒಂದು ಸಿಕ್ಕಿತ್ತು. ಅದರಲ್ಲಿ `ಇದು ಟ್ರೇಲರ್ ಅಷ್ಟೇ’ ಎಂದು ಸೂಚನೆ ನೀಡಲಾಗಿದ್ದು, ಮುಂದೆ ಯಾವುದೋ ದೊಡ್ಡ ಗಂಡಾಂತರ ಕಾದಿದೆ ಎಂಬ ಸೂಚನೆ ನೀಡಿರುವಂತಿತ್ತು. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಸ್ಪೋಟಕ ವಿಚಾರ ಬಯೊಲಾಗಿದೆ. ಅದೇನೆಂದ್ರೆ ಸ್ಫೋಟಕಗಳನ್ನು ಇಟ್ಟಿರುವ ಬಗೆಗೆ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತಿದೆ. ಟೆಲಿಗ್ರಾಮ್ ಅಪ್ಲಿಕೇಶನ್‌ನ ಸಂದೇಶದ ಮೂಲಕ ಉಗ್ರ ಸಾಂಘಟನೆ ಸ್ಫೋಟಕಗಳನ್ನು ಇಟ್ಟಿದ್ದು ನಾವೆಂದು ಘೋಷಿಸಿಕೊಂಡಿದೆ.

ಸಲಾರ್ ಫ್ಯಾನ್ಸ್ ಗೆ ಇಂದು ಸಾಲಿಡ್ ನ್ಯೂಸ್ ಕೊಟ್ಟ ಪ್ರಶಾಂತ್ ನೀಲ್..!ಯಾವಾಗ ರಿಲೀಸ್ ಗೊತ್ತಾ..?

ಹೌದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಅಂಬಾನಿಯ ಬಹುಮಹಡಿ ನಿವಾಸವಾದ ಆಂಟಿಲಿಯಾ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಈ ಸ್ಫೋಟಕಗಳು ಪತ್ತೆಯಾಗಿತ್ತು.  ಜೈಶ್-ಉಲ್-ಹಿಂದ್ ಮುಖೇಶ್ ಅಂಬಾನಿ ಬಳಿ ಬಿಟ್ ಕಾಯಿನ್ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ. ಆದ್ರೆ ಇನ್ನು ಇದರ ಬಗೆಗೆ ಇಲ್ಲಿಯವರೆಗೆ, ಮುಂಬೈ ಪೊಲೀಸರಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಮುಖೇಶ್ ಅಂಬಾನಿ ಮನೆಯ ಸಮೀಪ ಎಸ್ ಯುವಿ ಕಾರಿನಲ್ಲಿ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಈ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಕಗಳನ್ನು ಸಿದ್ಧಪಡಿಸಲು ಬಳಸಲಾಗುತ್ತದೆ. ದುಷ್ಕರ್ಮಿಗಳು ಸ್ವತಃ ಪೊಲೀಸರಿಗೆ ಕರೆ ಮಾಡಿ ಕಾರಿನಲ್ಲಿ ಜಿಲೆಟಿನ್ ಇರುವ ಬಗ್ಗೆ ಮಾಹಿತಿ ನೀಡಿದ್ದರು.

ಇವರೇ ನೋಡಿ ಈ ಬಾರಿ ‘ಬಿಗ್ ಬಾಸ್’ ಮನೆಗೆ ಎಂಟ್ರಿಯಾಗ್ತಿರೋರು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd