ಜೀಯೋ ಸಿಮ್ ಗ್ರಾಹಕರ ಸಂಖ್ಯೆ ಕಡಿತ – ಏರ್ಟೆಲ್ ಚಂದಾದಾರರ ಸಂಖ್ಯೆ ಹೆಚ್ಚಳ
ಫೆಬ್ರವರಿಯಲ್ಲಿ ಟೆಲಿಕಾಂ ಚಂದಾದಾರರ ಸಂಖ್ಯೆ 116.60 ಕೋಟಿಗೆ ಇಳಿದಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ತಿಳಿದುಬಂದಿದೆ. ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ (VI) ಗ್ರಾಹಕರಗಳ ಸಂಖ್ಯೆಯಲ್ಲಿ ಇಳಿಕೆಯುಂಟಾಗಿದೆ. ಭಾರತದಲ್ಲಿ 2022 ರ ಜನವರಿ ಅಂತ್ಯದ ವೇಳೆಗೆ 116.94 ಮಿಲಿಯನ್ ಫೋನ್ ಚಂದಾದಾರರ ಸಂಖ್ಯೆ ಇತ್ತು, ಫೆಬ್ರವರಿ 2022 ರ ಅಂತ್ಯದ ವೇಳೆಗೆ 116.60 ಮಿಲಿಯನ್‌ಗೆ ಇಳಿದಿದೆ.
ಸತತ ಮೂರನೇ ತಿಂಗಳು ರಿಲಯನ್ಸ್ ಗ್ರಾಹಕರ ಸಂಖ್ಯೆ ಕುಸಿತ
ಸತತ ಮೂರನೇ ತಿಂಗಳು ರಿಲಯನ್ಸ್ ಜಿಯೋ ತನ್ನ ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ. ಫೆಬ್ರವರಿಯಲ್ಲಿ ಕಂಪನಿಯ ಮೊಬೈಲ್ ಚಂದಾದಾರರ ಸಂಖ್ಯೆ 36.6 ಲಕ್ಷದಿಂದ 40.27 ಕೋಟಿಗೆ ಇಳಿದಿದೆ.
ವೊಡಾಫೋನ್ ಐಡಿಯಾ ವನ್ನ ಸಹ ಮೊಬೈಲ್ ಚಂದಾದಾರರು ನಿರಾಕರಿಸಿದ್ದಾರೆ. ಇದು 15.32 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡರೆ, BSNL ಮತ್ತು MTNL ಕ್ರಮವಾಗಿ 1.11 ಲಕ್ಷ ಮತ್ತು 5,097 ಸಂಪರ್ಕಗಳನ್ನ ಕಳೆದುಕೊಂಡಿವೆ.
15.91 ಲಕ್ಷ ಹೊಸ ಗ್ರಾಹಕರನ್ನ ಪಡೆದ ಏರ್‌ಟೆಲ್
ಅಂಕಿ ಅಂಶಗಳ ಪ್ರಕಾರ, ಭಾರ್ತಿ ಏರ್‌ಟೆಲ್ ಮೊಬೈಲ್ ಚಂದಾದಾರಿಕೆ ಯನ್ನ ಏರಿಸಿಕೊಂಡ ಏಕೈಕ ಕಂಪನಿಯಾಗಿದೆ. ಭಾರ್ತಿ ಏರ್‌ಟೆಲ್ ಫೆಬ್ರವರಿಯಲ್ಲಿ 15.91 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡಿಸಿಕೊಂಡಿದೆ. ಈ ಮೂಲಕ ಏರ್ಟೆಲ್ ಗ್ರಾಹಕರ ಸಂಖ್ಯೆ 35.80 ಕೋಟಿ ತಲುಪಿದೆ.