ರಾಜಾ ರಾಣಿ ರೋರರ್ ರಾಕೆಟ್ ಗಳ ಆರ್ಭಟ…! ಜೋಗ ಜಲಪಾತದ ವೈಭವ ವರ್ಣಾತೀತ..!
ಜೋಗ…. ರಾಜಾ ರಾಣಿ ರೋರರ್ ರಾಕೆಟ್ ಗಳ ಆರ್ಭಟದಿಂದ ಅತಿ ಎತ್ತರದಿಂದ ಧುಮ್ಮಿಕ್ಕುವ ಜೋಗ ಜಲಪಾತದ ಸೊಬಗು ಪ್ರವಾಸಿಗರನ್ನ ನಿಬ್ಬೆರಗಾಗಿಸುತ್ತೆ.. ಜೋಗದ ರಮಣೀಯ ದೃಶ್ಯ ನೋಡುವುದು ಒಂದು ಅದೃಷ್ಟವೇ.. ಅದಕ್ಕೆ ಸಾಯೋದರೊಳಗೆ ಒಮ್ಮೆ ಜೋಗ ನೋಡು ಎಂಬ ನಾನ್ಣುಡಿಯಂತೆ, ಖಂಡಿತವಾಗಿಯೂ ನಮ್ಮ ಜೀವಮಾನದಲ್ಲಿ ಈ ಜೋಗದ ವೈಭೋಗವನ್ನ ಒಮ್ಮೆ ಕಣ್ತುಂಬಿಕೊಳ್ಳಬೇಕು..
ಮಲೆನಾಡಿನ ತವರೂರು ಶಿವಮೊಗ್ಗದಲ್ಲಿಯೇ ಈ ಜೋಗದ ಗುಂಡಿ ಇರೋದು. ಜೋಗ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತೆ. ಆದರೆ ಮಳೆಗಾಲದಲ್ಲಿ ಜೋಗ ನೋಡೋಕೆ ಆಕಾಶದಿಂದ ಧರೆಗಿಳಿದ ಅಪ್ಸರೆಯಂತೆ ಕಾಣೋದ್ರಲ್ಲಿ ಎರೆಡು ಮಾತಿಲ್ಲ..
ಮಳೆಗಾಲದಲ್ಲಿ ಜೋಗದ ಗುಂಡಿಯ ಸೊಬಗನ್ನ ನೋಡುವುದೇ ಕಣ್ಣಿಗೆ ಹಬ್ಬ. ಆದ್ರೆ ಬೇಸರದ ಸಂಗಿತಿಯೆಂರೆ ªಮಳೆಗಾಲದ ಸಂದರ್ಭದಲ್ಲಿ ಜೋಗ ವೀಕ್ಷಣೆಗೆ ಅವಕಾಶವಿಲ್ಲ.. ಆದ್ರೆ ಚಳಿಗಾಲದಲ್ಲೂ ಮುಂಜು ಮುಸಿಕಿನ ವಾತಾವರಣದಲ್ಲಿ ಜೋಗದ ವೈಭೋಗ ಸವಿಯಬಹುದು.
ಅಧಿಕ ಮಳೆಯಾದರೆ ಶರಾವತಿ ನದಿಯ ರಭಸಕ್ಕೆ ಜೋಗ ಮೈದುಂಬಿ ಹರಿಯುವ ಪರಿ ವರ್ಣನಾತೀತ. ನಾಲ್ಕು ಕವಲುಗಳಲ್ಲದೆ, ಜೋಗದ ಎಲ್ಲ ಭಾಗದಿಂದಲೂ ನೀರು ಪ್ರಪಾತಕ್ಕೆ ಬೀಳುವ ದೃಶ್ಯ ರುದ್ರರಮಣೀಯಕ್ಕೆ ಸಮ. ಶರಾವತಿ ನದಿಯ ರೌದ್ರ ನರ್ತನ ಎಂದರೂ ಅತಿಶಯೋಕ್ತಿಯಾಗಲಾರದು. ಪ್ರವಾಸಿ ತಾಣಗಳು. ಅದರಲ್ಲೂ ಆಗುಂಬೆ ಘಾಟಿ, ಹಚ್ಚ ಹಸಿರ ಕಾನನದ ಹಾದಿ, ವಿಶ್ವ ಪ್ರಸಿದ್ಧ
(Jog falls) ಜೋಗದ ವಿಶೇಷತೆಗಳು..!
ಜೋಗವನ್ನ ‘ಗೇರುಸೊಪ್ಪಿನ ಜಲಪಾತ’ ಎಂದೂ ಸಹ ಕರೆಯಲಾಗುತ್ತೆ. ಇದು ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ. ಪ್ರವಾಸಿತಾಣಗಳ ತವರೂರು ಶಿವಮೊಗ್ಗದ ಅತಿ ಪ್ರಸಿದ್ಧ ತಾಣಗಳಲ್ಲಿ ಜೋಗ ಜಲಪಾತವೂ ಒಂದು. ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ0ತ ರಮಣೀಯರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು.
ಸೂರ್ಯಕಿರಣಗಳಿಂದ ಜಲಪಾತದ ದಿನದ ವಿವಿಧ ಕಾಲಗಳಲ್ಲಿ ಕಾಮನ ಬಿಲ್ಲು ಅನೇಕ ವೈವಿಧ್ಯ ತಾಳುತ್ತದೆ.
ಶಿವಮೊಗ್ಗದಿಂದ ಬರೋಬ್ಬರಿ 100 ಕಿ.ಮೀದೂರದಲ್ಲಿ ಸಾಗರ ತಾಲೂಕಿನ ತಾಳಗೊಪ್ಪ ಬಳಿ ಇದೆ. ಇಲ್ಲಿಗೆ ಸಾರ್ವಜನಿಕ ಸಂಚಾರದ ವ್ಯವಸ್ಥೆಯೂ ಇದೆ. ಆದ್ರೆ ನಿಮ್ಮ ಸ್ವಂತ ಗಾಡಿಯಲ್ಲಿ ಹೋದ್ರೆ ಅಲ್ಲಲ್ಲಿ ನಿಲ್ಲಿಸಿ ಫೋಟೋ ಶೂಟ್ ಮಾಡಿಸಿಕೊಂಡ ಹೋಗೋ ಕ್ರೇಜ್ ಬೇರೆನೇ ಇರುತ್ತೆ. ಜೋಗ ಜಲಪಾತಕ್ಕೆ ಸರಕಾರಿ ಹಾಗೂ ಖಾಸಗಿ ಬಸ್ಸುಗಳ ವ್ಯವಸ್ಥೆ ಅನುಕೂಲಕರವಾಗಿದೆ.
ಬೆಂಗಳೂರಿನಿಂದ ಜೋಗಕ್ಕೆ ಪ್ರಯಾಣ ಸುಲಭ. ತಡರಾತ್ರಿವರೆಗೂ ಶಿವಮೊಗ್ಗಕ್ಕೆ ಬಸ್‌ಸೇವೆ ಲಭ್ಯವಿದೆ. ಬೆಳಗ್ಗೆ 8ರ ಸುಮಾರಿಗೆ ಶಿವಮೊಗ್ಗ ತಲುಪಿದರೆ, ನಗರದಲ್ಲಿರುವ ಕೆಲ ತಾಣಗಳಿಗೆ ಭೇಟಿ ನೀಡಬಹುದು. ಸಾಗರಕ್ಕೆ ತಲುಪಿದ ತಕ್ಷಣ ಜೋಗ ಜಲಪಾತಕ್ಕೆ ಖಾಸಗಿ ಬಸ್, ವಾಹನಗಳು ಲಭ್ಯವಿವೆ. ಜಲಪಾತದ ಸುತ್ತಮುತ್ತ ತಿಂಡಿ, ಆಹಾರಕ್ಕೆ ಏನೂ ಕೊರತೆ ಇಲ್ಲ. ಶಿವಮೊಗ್ಗದ ಆಸುಪಾಸಿನಲ್ಲಿ ಕಾಣಸಿಗುವ ಚಂದ್ರಗುತ್ತಿ “ಶ್ರೀ ರೇಣುಕಾಂಬ ದೇವಸ್ಥಾನ” ಮತ್ತು ಕೋಟೆ, ಶಿವಪ್ಪನಾಯಕನ ಕೋಟೆ , ಕವಲೇದುರ್ಗದ ಕೋಟೆಗೆ ಭೇಟಿ ನೀಡಬಹುದು.