Joginder Sharma : ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…
2007ರ ಟಿ20 ವಿಶ್ವಕಪ್ ಹೀರೊ ಜೋಗಿಂದರ್ ಶರ್ಮಾ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಶುಕ್ರವಾರ ಅಂತಾರಾಷ್ಟ್ರೀಯ ಮತ್ತು ದೇಸಿ ಕ್ರಿಕೆಟ್ ಎಲ್ಲಾ ಮಾದರಿಗಳಿಗೆ ವಿದಾಯ ಹೇಳಿದರು.
2007 ಸೆ.24ರಂದು ನಡೆದ ಜೋಹನ್ಸ್ ಬರ್ಗ್ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ಹಾಕಿದ ಜೋಗಿಂದರ್ ಶರ್ಮಾ 13 ರನ್ ಅಂತರದಿಂದ ಗೆಲ್ಲಿಸಿಕೊಟ್ಟು ಭಾರತಕ್ಕೆ ಚಾಂಪಿಯನ್ ಪಟ್ಟ ಕೊಡಿಸಿದ್ದರು. ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. 21 ವರ್ಷಗಳ ಸುದೀರ್ಘ ಕ್ರಿಕೆಟ್ಗೆ ಇದೀಗ ಜೋಗಿಂದರ್ ಶರ್ಮಾ ತೆರೆ ಏಳೆದಿದ್ದಾರೆ.
ಇಂದು ತುಂಬ ಧನ್ಯತೆಯಿಂದ ನಾನ ದೇಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸುತ್ತಿದ್ದೇನೆ, 2002ರಿಂದ 2017ರವರೆಗೆ ಅದ್ಭುತ ವರ್ಷವಾಗಿತ್ತು. ದೇಶವನ್ನು ಪ್ರತಿನಿಧಿಸಿದ್ದು ದೊಡ್ಡ ಗೌರವ ಎಂದಿದ್ದಾರೆ. ಅವಕಾಶ ನೀಡಿದ ಬಿಸಿಸಿಐ, ಹರ್ಯಾಣ ಕ್ರಿಕೆಟ್ ಅಸೋಸಿಯೇಷನ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Joginder Sharma: The 2007 T20 World Cup hero announced his retirement…