Jos Buttler | ವಿರಾಟ್ ಕೊಹ್ಲಿ ಕೂಡ ಮನುಷ್ಯನೇ
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಿಂದ ದೂರವಾಗಿದ್ದ ವಿರಾಟ್ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.
ಆದ್ರೆ 16 ರನ್ ಗಳಿಗೆ ವಿರಾಟ್ ಹೋರಾಟ ಮುಕ್ತಾಯವಾಯ್ತು. ಆ ಮೂಲಕ ಅವರ ಬ್ಯಾಡ್ ಫಾರ್ಮ್ ಇಂಗ್ಲೆಂಡ್ ನಲ್ಲಿಯೂ ಮುಂದುವರೆದಿದೆ.
ಇನ್ನು ವಿರಾಟ್ ಕೊಹ್ಲಿ ಸದ್ಯದ ಫಾರ್ಮ್ ಬಗ್ಗೆ ಇಂಗ್ಲೆಂಡ್ ಕ್ಯಾಪ್ಟನ್ ಜೋಸ್ ಬಟ್ಲರ್ ಪ್ರತಿಕ್ರಿಯೆ ನೀಡಿದ್ದು, ಎಲ್ಲರ ಗಮನ ಸೆಳೆದಿದೆ.

ಬಟ್ಲರ್ ಮಾತನಾಡುತ್ತಾ.. ಕೊಹ್ಲಿ ಕೂಡ ಮನುಷ್ಯನೇ. ಒಂದೆರಡು ಪಂದ್ಯಗಳಲ್ಲಿ ಕಡಿಮೆ ಸ್ಕೋರ್ ಮಾಡಬಹುದು.
ಆದ್ರೆ ಒಂದು ಮಾತ್ರ ನೂರಕ್ಕೆ ನೂರು ನಿಜ. ವಿರಾಟ್ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಒಬ್ಬರು.
ಇನ್ನೂ ಹೇಳಬೇಕು ಅಂದ್ರೆ ಏಕದಿನ ಕ್ರಿಕೆಟ್ ನಲ್ಲಿ ಪ್ರಪಂಚದಲ್ಲಿಯೇ ಬೆಸ್ಟ್ ಬ್ಯಾಟರ್.
ಸುದೀರ್ಘಕಾಲದಿಂದ ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ.
ಆದ್ರೆ ಯಾವುದೇ ಆಟಗಾರನಿಗಾದರೂ ಫಾರ್ಮ್ ನಲ್ಲಿ ಇಲ್ಲದಿದ್ದಾಗ ಪರದಾಡುವುದು ಸಾಮಾನ್ಯವಾಗಿದೆ ಎಂದು ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ.