K. S. Eshwarappa | ಪತ್ರಕರ್ತರ ಪ್ರಶ್ನೆ ಕೆ.ಎಸ್.ಈಶ್ವರಪ್ಪ ತಬ್ಬಿಬ್ಬು
ಬಾಗಲಕೋಟೆ : 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದು, ಇದು ಮಾನ ಮರ್ಯಾದ ಇಲ್ಲದೇ ಇರೋರ ಕೇಳುವ ಪ್ರಶ್ನೆ ಅಂತಾ ಸಿಡಿಮಿಡಿಗೊಂಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಪತ್ರಕರ್ತರು, 40 ಪರ್ಸೆಂಟ್ ಕಮಿಷನ್ ಗೆ ಸಂಬಂಧಪಟ್ಟಂತೆ ಪ್ರಶ್ನೆ ಕೇಳಿದ್ರು.
ಆಗ ಈಶ್ವರಪ್ಪ, ಮಾನ ಮರ್ಯಾದೆ ಇಲ್ಲದೇ ಇರುವವರು ಕೇಳುವ ಪ್ರಶ್ನೆ ಇದು. ಅವರಿಗಂತೂ(ಕೆಂಪಣ್ಣ) ಜ್ಞಾನ ಇಲ್ಲ. ನೀವು ಮೈಮೇಲೆ ಜ್ಞಾನ ಇಟ್ಟಿಕೊಂಡು ಕೇಳಬೇಕು.
ಅವರು(ಕೆಂಪಣ್ಣ) ಕಾಂಗ್ರೆಸ್ ನಿಂದ ದುಡ್ಡು ತಿಂದು ಹೇಳಿಕೆ ಕೊಡ್ತಿರೋದು. ಆರೋಪ ಮಾಡಬೇಕಾದ್ರೆ ದಾಖಲೆ ಇರಬೇಕು ಎಂದು ವಾದಿಸಿದರು.
ಇದಕ್ಕೆ ಪತ್ರಕರ್ತರು “2018 ರಲ್ಲಿ ನರೇಂದ್ರ ಮೋದಿ 10% ಸರ್ಕಾರ ಎಂದಾಗ ಯಾವ ದಾಖಲೆ ಕೊಟ್ಟಿದ್ರಿ ಎಂದು ಪ್ರಶ್ನಿಸಿದರು.

ಇದಕ್ಕೆ ಈಶ್ವರಪ್ಪ ತಡಬಡಿಸಿ” ಅದು ಮೋದಿ ಹತ್ರ ಏನು ದಾಖಲೆ ಇತ್ತು. ನೀವು ಅವರನ್ನ ಕೇಳಿ ನನಗೇನು ಗೊತ್ತು ಎಂದು ಜಾರಿಕೊಂಡರು.
ನಾನಂತೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 10% ಸರ್ಕಾರ ಎಂದೂ ಯಾವತ್ತು ಮಾತಾಡಿಲ್ಲ. ಈಗ ನನ್ನ ಮೇಲೆ ರಾಹುಲ್ ಗಾಂಧಿ ಸಹ ಯಾಕೆ ರಾಜೀನಾಮೆ ಕೊಟ್ರಿ ಅಂದಿದ್ದಾರೆ.
ಮರ್ಯಾದೆ ಪ್ರಶ್ನೆ ನಾನು ರಾಜೀನಾಮೆ ಕೊಟ್ಟೆ. ನಾನು ತನಿಖೆಯಲ್ಲಿ ನಿರ್ದೋಷಿ ಎಂದು ಗೊತ್ತಾದ ಮೇಲೂ ನನ್ನ ಹೆಸರೇ ಗೊತ್ತಿಲ್ಲದ ರಾಹುಲ್ ಗಾಂಧಿ ಕಡೆಯಿಂದ ಮಾತಾಡಿಸಿದ್ರು.
ಆ ಕೆಂಪಣ್ಣನಿಗೆ ಈಗಲೂ ಹೇಳ್ತೇನೆ. ನಿಮ್ಮ ಕಡೆ ಒಬ್ಬ ಮಂತ್ರಿ ಬಗ್ಗೆ ದಾಖಲೆ ಇದ್ರೆ ಕೊಡಿ.
ಸಂತೋಷ ಪಾಟೀಲ ಮೇಲೆ ನಾನು ಕೇಸ್ ಹಾಕಿದೆ. ಪಾಪ ಅವನು ಸೂಸೈಡ್ ಮಾಡಿಕೊಂಡ, ನಾನೇನು ಮಾಡ್ಲಿ ಎಂದು ಪ್ರಶ್ನಿಸಿದರು.