ನಟ ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾ ನಂತರ ಯಸ್ಸಿನ ಉತ್ತುಂಗದಲ್ಲಿ ತೇಲುತ್ತಿದ್ದಾರೆ.
ಈಗ ಅಭಿಮಾನಿಗಳು ಕಾಂತಾರ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದಾರೆ. ಸದ್ಯ ರಿಷಬ್ ಸಿನಿಮಾದಲ್ಲಿ ಜ್ಯೂ.ಎನ್ಟಿಆರ್ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕರಾವಳಿಯಲ್ಲಿ ‘ಕಾಂತಾರ’ ಚಿತ್ರೀಕರಣ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಜ್ಯೂ.ಎನ್ಟಿಆರ್ ಜೊತೆ ದಿಢೀರ್ ಎಂದು ಪೋಸ್ ಕೊಟ್ಟಿದ್ದಾರೆ. ಹೀಗಾಗಿ ಅಭಿಮಾನಿಗಳ ತಲೆಯಲ್ಲಿ ಏನೇನು ವಿಚಾರ ಬರುತ್ತಿವೆ.
ರಿಷಬ್ ಶೆಟ್ಟಿ ಈಗ ಎಲ್ಲೂ ಕಾಣುತ್ತಿಲ್ಲ. ಅದನ್ನು ಅವರೇ ಹೇಳಿದ್ದರು. ಶೂಟಿಂಗ್ ಆರಂಭವಾದ ಮೇಲೆ ನಾಟ್ ರಿಚೇಬಲ್ ಎಂದಿದ್ದರು. ಈ ನಡುವೆ ಟಾಲಿವುಡ್ ಯಂಗ್ ಟೈಗರ್ ಜ್ಯೂ.ನ್ಟಿಆರ್ ಜೊತೆ ಪತ್ನಿ ಪ್ರಗತಿ ಸಮೇತ ಕಾಣಿಸಿಕೊಂಡಿದ್ದಾರೆ. ಕಾಂತಾರದಲ್ಲಿ ಜ್ಯೂ.ನ್ ಟಿಆರ್ ಕೂಡ ಬಣ್ಣ ಹಚ್ಚಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಲಿದ್ದಾರೆ. ಹೀಗಾಗಿ ಅಭಿಮಾನಿಗಳು ಹೊಸ ಪ್ರಾಜೆಕ್ಟ್ ಏನಾದರೂ ಇರಬಹುದು ಎಂದು ಚರ್ಚಿಸುತ್ತಿದ್ದಾರೆ.