K.C.Narayana Gowda | ಮಂಡ್ಯದಲ್ಲಿ 4 ಸೀಟ್ ಗೆದ್ದರೆ ಇಂಡಿಯಾ ಗೆದ್ದಂತೆ
ಮಂಡ್ಯ : ಸಕ್ಕರೆ ನಾಡಿನಲ್ಲಿ ಕಮಲ ಅರಳಿಸಲು ರಾಜ್ಯ ಕೇಸರಿ ಪಡೆ ನಾನಾ ಕಸರತ್ತುಗಳನ್ನು ನಡೆಸುತ್ತಿದೆ.
ಅದರ ಭಾಗವಾಗಿ ಇಂದು ಮಂಡ್ಯದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡುತ್ತಾ, ಮಂಡ್ಯದಲ್ಲಿ ನಾಲ್ಕು ಸೀಟ್ ಗೆದ್ದರೇ ಇಂಡಿಯಾ ಗೆದ್ದಂತೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರು, ಮಂಡ್ಯದಲ್ಲಿ ನಾಲ್ಕು ಸೀಟ್ ಗೆದ್ದರೆ ಇಂಡಿಯಾ ಗೆದ್ದಂತೆ. ಮಂಡ್ಯಕ್ಕೆ ಮೋದಿ ಕರೆಸಿ ಶಕ್ತಿ ತುಂಬುವ ಕೆಲಸ ಮಾಡ್ತೇನೆ.
ಕೆ.ಆರ್.ಪೇಟೆ ಶಾಸಕನಾಗಬೇಕಾದರೆ ನಿಮ್ಮೆಲ್ಲರ ಆಶೀರ್ವಾದ ಇದೆ. ಆ ಋಣ ತೀರಿಸಲು, ಎಲ್ಲಾ ಸಮುದಾಯಕ್ಕೂ ಸಮುದಾಯ ಭವನ ಕಟ್ಟಿಸುತ್ತೇನೆ.
20ಕ್ಕೂ ಹೆಚ್ಚು ಸಮುದಾಯ ಭವನಕ್ಕೆ ಮುಂದಾಗಿದ್ದೇನೆ. ಹಣ ಬಿಡುಗಡೆಯಾಗಿದೆ, ಎಲ್ಲಾದನ್ನು ಕೆಲಸ ಶುರುವಾಗಿದೆ. ಜಿಲ್ಲೆಯಲ್ಲೂ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಶಿವಮೊಗ್ಗ ಜಿಲ್ಲೆಗೆ ಉಸ್ತುವಾರಿಯಾಗಿರುವ ಬಗ್ಗೆ ಮಾತನಾಡಿದ ಸಚಿವರು, ನಾನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾಗಿದ್ದೆ. ನನ್ನ ತೆಗೆದುಕೊಂಡು ಹೋಗಿ ಶಿವಮೊಗ್ಗಕ್ಕೆ ಕಟ್ಟಿಹಾಕಿದ್ದಾರೆ.

ದೊಡ್ಡ ದೊಡ್ಡ ಹುಲಿ ಇದ್ದಾವೆ. ನಾನು ಚಿಕ್ಕವನಾಗಿ ಅಲ್ಲಿ ಕೆಲಸ ಮಾಡ್ತಿದ್ದೇನೆ. ಕೆ.ಆರ್.ಪೇಟೆಯಿಂದ ಹೋಗಿ ಶಿವಮೊಗ್ಗ ಉಸ್ತುವಾರಿ ಸಚಿವನಾಗಿದ್ದೇನೆ, ಅವರಿಗೆ ಸಾಷ್ಟಾಂಗ ನಮಸ್ಕಾರ ಹೇಳ್ತೇನೆ.
ಶಿವಮೊಗ್ಗದಲ್ಲಿ ನಾನು ಮಾಡುವಂತ ಕೆಲಸ ಏನು ಇಲ್ಲ. ಎಲ್ಲವನ್ನು ಬುಗರಿ ತಿರಿಗಿಸಿದ ಹಾಗೆ ಈಶ್ವರಪ್ಪ ಮಾಡ್ತಿದ್ದಾರೆ. ನಾರಾಯಣ್ ಗೌಡ ಹೋಗೋದು ಬರಿ ಉದ್ಘಾಟನೆ ಮಾಡೋದು.
ಸುಮ್ಮನೆ ಕುರುವುದು ಊಟ ಮಾಡಿ ಬರುವುದು ಅಷ್ಟೆ. ಎಲ್ಲವನ್ನೂ ಈಶ್ವರಪ್ಪ ಅವರೇ ಮಾಡ್ತಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.