ಆರ್ ಸಿಬಿಗೂ ಬೇಕು.. ಲಖನೌಗೂ ಬೇಕು.. ರಾಹುಲ್ ಗೆ ಯಾಕಿಷ್ಟು ಡಿಮ್ಯಾಂಡ್..?

1 min read
KL Rahul

ಆರ್ ಸಿಬಿಗೂ ಬೇಕು.. ಲಖನೌಗೂ ಬೇಕು.. ರಾಹುಲ್ ಗೆ ಯಾಕಿಷ್ಟು ಡಿಮ್ಯಾಂಡ್..?

ಟೀಂ ಇಂಡಿಯಾದ ರಾಕಿಂಗ್ ಸ್ಟಾರ್ ಕೆ.ಎಲ್.ರಾಹುಲ್ ಸದ್ಯ ಕ್ರಿಕೆಟ್ ಜಗತ್ತಿನ ಭಾರಿ ಹವಾ ಮಾಡುತ್ತಿದ್ದಾರೆ.

ಟೆಸ್ಟ್, ಏಕದಿನ, ಟಿ 20, ಪ್ರಿಮಿಯರ್ ಲೀಗ್ ಹೀಗೆ ಎಲ್ಲಾ ಕಡೆ ಕನ್ನಡಿಗನ ಬ್ಯಾಟ್ ಘರ್ಜಿಸುತ್ತಿದೆ.

ಈ ಮಧ್ಯೆ ಇಂಡಿಯನ್ ಪ್ರಿಮಿಯರ್ ಲೀಗ್ ನ 15ನೇ ಆವೃತ್ತಿಯಲ್ಲಿ ರಾಹುಲ್ ಗೆ ಭಾರಿ ರಿಮ್ಯಾಂಡ್ ಕ್ರಿಯೇಟ್ ಆಗಿದೆ.

ಮೂಲಗಳ ಪ್ರಕಾರ ರಾಹುಲ್, ಪಂಜಾಬ್ ತಂಡವನ್ನು ತ್ಯಜಿಸೋದು ಪಕ್ಕಾ ಆಗಿದೆ. ಹಾಗಾದ್ರೆ ರಾಹುಲ್ ಯಾವ ತಂಡ ಸೇರಲಿದ್ದಾರೆ.

kl rahul saakshatv team india

ಯಾವ ತಂಡ ರಾಹುಲ್ ಅವರನ್ನು ಖರೀದಿಸಲಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.

ಈ ಮಧ್ಯೆ ಲಖನೌ ತಂಡಕ್ಕೆ ರಾಹುಲ್ ಕ್ಯಾಪ್ಟನ್ ಆಗಲಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ.

ಇನ್ನೊಂದು ಕುತೂಹಲಕಾರಿ ಸಂಗತಿ ಏನಂದರೇ ರಾಹುಲ್ ಟ್ವಿಟ್ಟರ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಫಾಲೋ ಮಾಡುತ್ತಿದ್ದಾರೆ.

ಇದನ್ನ ಗಮನಿಸಿದರೇ ರಾಹುಲ್ ಪಂಜಾಬ್ ತಂಡ ಬಿಡೋದು ಗ್ಯಾರಂಟಿ.. ಆದ್ರೆ ಅವರು ಸೇರಲಿರುವ ತಂಡ ಯಾವುದು..?

ಅದರಲ್ಲೂ ಅಂದಹಾಗೆ ರಾಹುಲ್ ಗಾಗಿ ಬರೋಬ್ಬರಿ ಐದು ತಂಡಗಳು ಕ್ಯೂನಲ್ಲಿವೆ.

ಅದರಲ್ಲಿ ಮುಖ್ಯವಾಗಿ ಅಹ್ಮದಾಬಾದ್, ಲಖನೌ, ಆರ್ ಸಿಬಿ, ಎಸ್ ಆರ್ ಎಚ್, ಆರ್ ಆರ್ ತಂಡಗಳು ರಾಹುಲ್ ಗೆ ಗಾಳ ಹಾಕಲು ಸಜ್ಜಾಗಿವೆ.

kl rahul saakshatv team india

ರಾಹುಲ್ ಗೆ ಯಾಕಿಷ್ಟು ಡಿಮ್ಯಾಂಡು..!

ಕಿಂಗ್ ಕೊಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಆಧಾರ ಸ್ತಂಭ ಯಾರು..? ಎಂಬ ಪ್ರಶ್ನೆಗೆ ತಟ್ ಅಂತ ಬರೋ ಉತ್ತರ ಕೆ.ಎಲ್.ರಾಹುಲ್..!

ಸದ್ಯ ಟೀಂ ಇಂಡಿಯಾದಲ್ಲಿ ವಿರಾಟ್ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ದರ್ಬಾರ್ ನಡೆಸುತ್ತಿದ್ದಾರೆ.

ಅದೆಷ್ಟೋ ಮ್ಯಾಚ್ ಗಳನ್ನು ಈ ಇಬ್ಬರು ಆಟಗಾರರು ಸಿಂಗಲ್ ಹ್ಯಾಂಡೆಡ್ ಆಗಿ ಗೆಲ್ಲಿಸಿಕೊಟ್ಟಿದ್ದಾರೆ.

ಆದ್ರೆ ಇವರ ಬಳಿಕ ಯಾರು ಅಂತ ಪ್ರಶ್ನೆ ಬಂದ್ರೆ ಸದ್ಯದ ಮಟ್ಟಿಗೆ ಆ ಭರವಸೆಯನ್ನ ಮೂಡಿಸಿರುವುದು ಕನ್ನಡಿಗ ಕೆ.ಎಲ್.ರಾಹುಲ್..!!

ಹೌದು..! ಈಗಿನ ಕ್ರಿಕೆಟರ್ಸ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಬಳಿಕ ಒಬ್ಬ ಟಾಪ್ ಕ್ಲಾಸ್ ಕ್ರಿಕೆಟರ್ ಅಂದ್ರೆ ಅದು ಕೆ.ಎಲ್.ರಾಹುಲ್.

ಇದ್ರಲ್ಲಿ ಯಾವುದೇ ಅನುಮಾನ ಪಡುವ ಅವಶ್ಯಕತೆಯೇ ಇಲ್ಲ. ಯಾಕೆಂದ್ರೆ ರಾಹುಲ್ ಪಕ್ಕಾ ಕ್ಲಾಸ್ ಪ್ಲೇಯರ್.

ಗ್ಯಾಪ್ ಹುಡುಕುವುದು, ಟೈಮಿಂಗ್, ಬ್ಯಾಟಿಂಗ್ ಟೆಕ್ನಿಕ್, ರೇಂಜಿಂಗ್ ಶಾಟ್ಸ್ ಸೇರಿದಂತೆ ಕ್ರಿಕೆಟ್ ಬುಕ್ ನ ಎಲ್ಲ ಶಾಟ್ ಗಳನ್ನ ರಾಹುಲ್ ಕರಗತ ಮಾಡಿಕೊಂಡಿದ್ದಾರೆ.

ಮುಖ್ಯವಾಗಿ ಭಾರತೀಯ ಕ್ರಿಕೆಟ್ ನಲ್ಲಿ ಕೆಲ ಅಪರೂಪದ ಬ್ಯಾಟ್ಸ್ ಮೆನ್ ಗಳು ಮಾತ್ರ ಸ್ವೀಪ್ ಶಾಟ್ ಗಳನ್ನ ಆಡುತ್ತಾರೆ. ಅದರಲ್ಲಿ ರಾಹುಲ್ ಕೂಡ ಒಬ್ಬರು..!

ರಾಹುಲ್ ಸ್ವೀಪ್ ಜೊತೆಗೆ ರಿವರ್ಸ್ ಸ್ವೀಪ್ ಕೂಡ ಮಾಡುವುದು ವಿಶೇಷ. ಕೇವಲ ಕ್ಲಾಸ್ ಶಾಟ್ ಗಳಲ್ಲದೇ ಬಿಗ್ ಸಿಕ್ಸರ್ ಗಳನ್ನ ಹೊಡೆಯೋದ್ರಲ್ಲಿ ರಾಹುಲ್ ಪಂಟರ್.

kl rahul saakshatv team india

ಒಂದೇ ಮಾತಿನಲ್ಲಿ ಹೇಳೋದಾದ್ರೆ ರಾಹುಲ್ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿಯ ಕ್ಲಾಸ್, ರೋಹಿತ್ ರ ಮಾಸ್ ಎರಡೂ ಒಳಗೊಂಡಿರುತ್ತೆ.

ಯಾವುದೇ ರೀತಿಯಿಂದ ನಾವು ಯೋಚನೆ ಮಾಡಿದ್ರೂ ಕೆ.ಎಲ್. ರಾಹುಲ್, ವಿರಾಟ್, ರೋಹಿತ್ ರ ಉತ್ತರಾಧಿಕಾರಿ ಅನ್ನೋದ್ರಲ್ಲಿ ಡೌಟೇ ಇಲ್ಲ.

ಇದಲ್ಲದೇ ಟಿ20 ಮಾದರಿ ಯಲ್ಲಿ ರಾಹುಲ್ ಉತ್ತಮ ದಾಖಲೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಉಪ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಇದು ಯಾವುದೇ ಫ್ರಾಂಚೈಸಿಯ ಬ್ರ್ಯಾಂಡ್ ವಾಲ್ಯೂ ಹೆಚ್ಚಿಸುತ್ತದೆ. ಐಪಿಎಲ್‍ನಲ್ಲಿ ರಾಹುಲ್ ಅವರ ಅಂಕಿಅಂಶಗಳು ಇತರ ಆಟಗಾರರಿಗಿಂತ ಉತ್ತಮವಾಗಿವೆ.

ನಾಲ್ಕು ಋತುಗಳಲ್ಲಿ 550ಕ್ಕೂ ಹೆಚ್ಚು ರನ್ ಗಳಿಸಿರುವ ರಾಹುಲ್ ನಾಲ್ಕು ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ.

ವಿಕೆಟ್-ಕೀಪರ್-ಬ್ಯಾಟ್ಸ್‍ಮನ್ ಆಗಿ ತಂಡಕ್ಕೆ ಹೆಚ್ಚುವರಿ ಶಕ್ತಿ. ಐಪಿಎಲ್-2021ರ ಋತುವಿನಲ್ಲಿ ರಾಹುಲ್ 13 ಇನ್ನಿಂಗ್ಸ್‍ಗಳಲ್ಲಿ 626 ರನ್ ಗಳಿಸಿದ್ದರು.

ಔಟಾಗದೆ 98 ರನ್ ಗಳಿಸಿದ್ದು ಗರಿಷ್ಠ ಸ್ಕೋರ್. ದೇಶದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd