K. S. Eshwarappa | ಸ್ವಯಂ ಪ್ರೇರಿತವಾಗಿ ಮತಾಂತರವಾದರೆ ತಪ್ಪೇನಿಲ್ಲ
ಮೈಸೂರು : ಸ್ವಯಂ ಪ್ರೇರಿತವಾಗಿ ಮತಾಂತರವಾದರೆ ತಪ್ಪೇನಿಲ್ಲ. ಆದ್ರೆ ಹಿಂದುಳಿದ, ದಲಿತ, ಬಡವರಿಗೆ ಆಸೆ, ಆಮಿಷ ತೋರಿಸಿ ಮತಾಂತರವಾಗುತ್ತಿರುವುದು ನಡೆಯುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಿನ್ನೆ ವಿಧಾನ ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಹಿಂದುಳಿದ, ದಲಿತ, ಬಡವರಿಗೆ ಆಸೆ, ಆಮಿಷ ತೋರಿಸಿ ಮತಾಂತರವಾಗುತ್ತಿರುವುದು ನಡೆಯುತ್ತಿದೆ.

ದೇಶದ ವೋಟಿಂಗ್ ಸಮೀಕ್ಷೆಯಲ್ಲಿ ಮತಾಂತರ ಆಗುತ್ತಿರುವುದು ಗೊತ್ತಾಗುತ್ತಿದೆ. ಕಡು ಬಡವರಿಗೆ ಆಮಿಷ ತೋರಿಸಿ ಮತಾಂತರ ನಡೆಸುತ್ತಿದ್ದಾರೆ. ಸ್ವಯಂ ಪ್ರೇರಿತವಾಗಿ ಮತಾಂತರವಾದರೆ ತಪ್ಪೇನಿಲ್ಲ ಎಂದು ಹೇಳಿದರು.
ಇನ್ನು ನಿನ್ನೆ ನಡೆದಿದ್ದು ಚಾರಿತ್ರಿಕ ಸನ್ನಿವೇಶ. ಕಾಂಗ್ರೆಸ್ ನ ಕೆಲ ನಾಯಕರು ಬಿಲ್ ನ್ನು ಹರಿದು ಹಾಕಿ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ. ಸೋನಿಯಾ, ರಾಹುಲ್ ಗಾಂಧಿಗೆ ಸಂತೃಪ್ತಿ ಪಡಿಸಿಬೇಕೆಂದು ಬಿಲ್ ನ್ನು ಹರಿದು ಹಾಕಿದ್ದಾರೆ. ಈ ವಿಧೇಯಕ ಅಂಗಿಕಾರವಾಗಿರುವುದು ಇತಿಹಾಸ ಸೃಷ್ಟಿ ಮಾಡಿದಂತೆ. ಈ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ ಎಂದು ಈಶ್ವರಪ್ಪ ಬಣ್ಣಿಸಿದ್ದಾರೆ.