Kabzaa Song : ಚುಮ್ ಚುಮ್ ಚಳಿ ಚಳಿ ಹಾಡು ಬಿಡುಗಡೆ – ತಾನ್ಯ ಹೋಪ್ ಜೊತೆ ಉಪ್ಪಿ ಸ್ಟೆಪ್
ಕನ್ನಡ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಕಬ್ಜಾ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ಚುಮುಚುಮು ಚಳಿ ಚಳಿ ಎಂಬ ಹಾಡಿಗೆ ತಾನ್ಯ ಹೋಪ್ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ. ನಿನ್ನೆ ಶಿಡ್ಲಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡನ್ನ ಬಿಡುಗಡೆ ಮಾಡಲಾಗಿದೆ.
ಆರ್ ಚಂದ್ರು ನಿರ್ದೇಶನ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಬ್ಜಾ ಚಿತ್ರ ಈಗಾಗಲೇ ಟೀಸರ್ ಮತ್ತು ಹಾಡಿನಿಂದಾಗಿ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಕಬ್ಜಾ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿವೆ. ಇದೀಗ ಮೂರನೆ ಹಾಡು ಚುಮು ಚುಮು ಚಳಿ ಚಳಿ ಎಂಬ ಹಾಡನ್ನ ಬಿಡುಗಡೆ ಮಾಡಲಾಗಿದೆ. ಹಾಡಿಗೆ ರವಿ ಬಸ್ರೂರ್ ಸಂಗೀತವನ್ನ ನೀಡಿದ್ದಾರೆ. ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಐರಾ ಉಡುಪಿ, ಮನೀಶ್ ದಿನಕರ್, ಸಂತೋಷ್ ವೆಂಕಿ ಧ್ವನಿ ನೀಡಿದ್ದಾರೆ.
ಹಾಡಿನಲ್ಲಿ ತಾನ್ಯ ಹೋಪ್ ಜೊತೆ ಉಪ್ಪಿ ಕೂಡ ಸ್ಟೆಪ್ ಹಾಕಿದ್ದು ಜಾನಿ ಮಾಸ್ಟರ್ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಕಬ್ಜಾ ಚಿತ್ರದ ಬೇರೆ ಬೇರೆ ಭಾಷೆಯ ಹಾಡುಗಳು ಸಹ ರಿಲೀಸ್ ಮಾಡಲಾಗಿದೆ. ಚಿತ್ರ ಮಾರ್ಚ್ 17 ರಂದು ದೇಶಾದ್ಯಂತೆ ತೆರೆಗೆ ಬರುತ್ತಿದೆ.
Kabzaa Song : Chum Chum Chali Chali Song Released – Uppi Step with Tanya Hope