ತೈಲ ಶ್ರೀಮಂತ ದೇಶದಲ್ಲಿ ತೈಲ ಬೆಲೆ ಹೆಚ್ಚಳಕ್ಕೆ ಹಿಂಸಾಚಾರ – ಉಗ್ರರನ್ನ ಗುಂಡಿಕ್ಕಿ ಕೊಲ್ಲಲು ಸೂಚನೆ

1 min read

ತೈಲ ಶ್ರೀಮಂತ ದೇಶದಲ್ಲಿ ತೈಲ ಬೆಲೆ ಹೆಚ್ಚಳಕ್ಕೆ ಹಿಂಸಾಚಾರ – ಉಗ್ರರನ್ನ ಗುಂಡಿಕ್ಕಿ ಕೊಲ್ಲಲು ಸೂಚನೆ

ತೈಲ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಕಜಾಕಿಸ್ತಾನದಲ್ಲಿ ತೈಲ ಬೆಲೆ ಹೆಚ್ಚಳ ಹಿನ್ನೆಲೆ ಹಿಂಸಾಚಾರ ಭುಗಿಲೆದ್ದಿದ್ದು  20 ಕ್ಕೂ ಅಧಿಕ ಅಧಿಕಾರಿಗಳು ಮೃತಪಟ್ಟಿರೋದಾಗಿ ವರದಿಯಾಗಿದೆ..

ಇದೀಗ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಆ ದೇಶದ ಅಧ್ಯಕ್ಷ ಕಾಸ್ಯಾಂ ಜೊಮಾರ್ಟ್‌ ಟೊಕಯೆವ್‌ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಲ್ಲಿ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು  ಹೇಳಿಕೊಂಡಿದ್ದಾರೆ..

ಈ ಉದ್ವಿಗ್ನ ಪರಿಸ್ಥಿತಿಗೆ ಉಗ್ರರು, ಭಯೋತ್ಪಾದಕರು  ಕಾರಣರಾಗಿದ್ದಾರೆ. ಶರಣಾಗತಿ ಆಗದಿದ್ದರೆ ಅವರನ್ನು ನಿರ್ಮೂಲನೆ ಮಾಡಲು ಸೂಚಿಸಲಾಗಿದೆ ಎಂದಿದ್ದಾರೆ.

ಅಲ್ಲದೇ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸುವಂತೆ ಕೆಲವು ರಾಷ್ಟ್ರಗಳ ನಾಯಕರು ನೀಡಿರುವ ಸಲಹೆಯನ್ನು ತಿರಸ್ಕರಿಸಿರುವ ಅವರು ಅಪರಾಧಿಗಳು ಮತ್ತು ಕೊಲೆಗಾರರ ಜತೆ ಏನು ಸಂಧಾನ ನಡೆಸುವುದು ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd