Kajala Aggarwal : ಕಾಜಲ್ ಅಗರ್ ವಾಲ್ ರೀ ಎಂಟ್ರಿ ಯಾವಾಗ..?
ದಕ್ಷಿಣ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳುನ್ನು ಹೊಂದಿರುವ ನಟಿ ಕಾಜಲ್ ಆಗರ್ವಾಲ್ ಅವರ ರೀ ಎಂಟ್ರಿ ಯಾವಾಗ..? ಎಂಬ ಪ್ರಶ್ನೆ ಸಿನಿಮಾ ದುನಿಯಾದಲ್ಲಿ ಹರಿದಾಡುತ್ತಿದೆ.
ಇದಕ್ಕೂ ಮುನ್ನಾ ತೆಲುಗು, ತಮಿಳು ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ ಕಾಜಲ್, 2022ರಲ್ಲಿ ಮದುವೆ ಮಾಡಿಕೊಂಡು ಸಿನಿಮಾಗಳಿಗೆ ದೂರವಾದರು.
ಸಾಕಷ್ಟು ಮಂದಿ ನಟಿಯರು ಮದುವೆಯ ನಂತರ ನಟನೆಯನ್ನು ಮುಂದುವರೆಸಿದ್ದಾರೆ. ಆದ್ರೆ ಕಾಜಲ್ ಮಾತ್ರ ನಟನೆಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟು ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
ಅಲ್ಲದೇ ಕಳೆದ ಏಪ್ರಿಲ್ ನಲ್ಲಿ ಮಗುವಿಗೆ ಜನ್ಮ ಕೂಡ ನೀಡಿದರು. ಸದ್ಯ ಸಿನಿಮಾಗಳಿಂದ ದೂರವಿದ್ದರೂ ಒಳ್ಳೆಯ ಕಥೆ ಸಿಕ್ಕರೇ ರೀ ಎಂಟ್ರಿ ಮಾಡುವುದಾಗಿ ಕಾಜಲ್ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಆಚಾರ್ಯ ಸಿನಿಮಾದಲ್ಲಿ ಕಾಜಲ್ ನಟಿಸಿದ್ದರೂ ಎಡಿಟಿಂಗ್ ನಲ್ಲಿ ಅವರ ಪಾತ್ರವನ್ನ ತೆಗೆದುಹಾಕಲಾಗಿದೆ.
ಇನ್ನು ಕಾಜಲ್ ನಟಿಸಿರುವ ಮತ್ತೊಂದು ಭಾರಿ ಸಿನಿಮಾ ಅಂದ್ರೆ ಅದು ಇಂಡಿಯನ್ 2. ಶಂಕರ್ ನಿರ್ದೇಶನದ ಲೈಕಾ ಪ್ರೋಡಕ್ಷನ್ ನಿರ್ಮಿಸುತ್ತಿರುವ ಈ ಸಿನಿಮಾ ಕೆಲವೊಂದು ಕಾರಣಗಳಿಂದ ನಿಂತು ಹೋಗಿದೆ.
ಇದರಲ್ಲೂ ಕೂಡ ಕಾಜಲ್ ಅಗರ್ ವಾಲ್ ಅವರನ್ನ ತೆಗೆದು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಹೀಗಾಗಿ ಕಾಜಲ್ ಮತ್ತೆ ನಟನೆಯ ಜೀವನಕ್ಕಾ ಕಾಲಿಡುತ್ತಾ..? ಇಲ್ಲವಾ..? ಪ್ರಶ್ನೆ ಎಲ್ಲರಲ್ಲೂ ಮೂಡಿದೆ.