ಕಲಬುರಗಿ Kalaburagi : ಸರಣಿ ಅಪಘಾತದಲ್ಲಿ ಅಣ್ಣ-ತಂಗಿ ಸಾವು
ಕಲಬುರಗಿ : ಬೈಕ್, ಟೆಂಪೋ ಮತ್ತು ಕಾರು ನಡುವೆ ಸರಣಿ ಅಪಘಾತದಲ್ಲಿ ಅಣ್ಣ ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ಹೊರವಲಯದ ಶರಣಸಿರಸಗಿ ಗ್ರಾಮದ ಬಳಿ ನಡೆದಿದೆ.
ಶಿವೂರು ಗ್ರಾಮದ ನಿವಾಸಿಗಳಾದ ಅಜಯ್ ರೋಡಗಿ (29) ಹಾಗೂ ಪ್ರೇಮಾ ಪ್ರವೀಣ (27) ಮೃತರಾಗಿದ್ದಾರೆ.
ಇವರು ಬೈಕ್ ನಲ್ಲಿ ಕಲಬುರಗಿಯಿಂದ ಅಫಜಲಪುರಕ್ಕೆ ಹೊರಟಿದ್ದರು. ಈ ವೇಳೆ ಅವಘಡ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.
ಇನ್ನು ಘಟನೆಯಲ್ಲಿ ಇನ್ನೂ ಐವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.