Kalaburagi | ಕಲುಷಿತ ನೀರು ಸೇವಿಸಿ ಐವರು ಅಸ್ವಸ್ಥ
ಕಲಬುರಗಿ : ಕಲುಷಿತ ನೀರು ಸೇವಿಸಿ ಓರ್ವ ಮೃತ ಪಟ್ಟು, ಐವರು ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿಯ ಗೊಬ್ಬುರ ವಾಡಿಯಲ್ಲಿ ನಡೆದಿದೆ. ಸಾಬಣ್ಣ ಮೃತ ದುರ್ದೈವಿಯಾಗಿದ್ದಾರೆ.
ಕಲುಷಿತ ನೀರು ಸೇವಿಸಿ ಗ್ರಾಮದ ಜನರಿಗೆ ವಾಂತಿ, ಬೇಧಿ ಬಾಧಿಸಿತ್ತು.

ಇದರಿಂದ ಓರ್ವ ಮೃತಪಟ್ಟಿದ್ದರೇ, ಐವರು ತೀವ್ರ ಅಸ್ವಸ್ಥಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಸದ್ಯ ಐವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.