ಕಲಬುರಗಿ | ಜನ ಆತಂಕಕ್ಕೆ ಕಾರಣವಾಗಿದ್ದ ಮೊಸಳೆ ಸೆರೆ crocodile
ಕಲಬುರಗಿ : ತೀವ್ರ ಕಾರ್ಯಾಚರಣೆಯ ಬಳಿಕ ಕಳೆದ ಎಂಟತ್ತು ದಿನಗಳಿಂದ ಜನರಲ್ಲಿ ಭೀತಿ ಹುಟ್ಟಿಸಿದ ಮೊಸಳೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳ ಯಶಸ್ವಿಯಾಗಿದ್ದಾರೆ.
ಕಲಬುರಗಿ ನಗರದ ರಾಜಾಪುರ ಪ್ರದೇಶದ ಹೊಂಡದಲ್ಲಿ ಕಾಣಿಸಿಕೊಂಡಿದ್ದ ಎರಡು ಮೊಸಳೆಗಳ ಪೈಕಿ ಮರಿ ಮೊಸಳೆಯನ್ನು ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ.
ಮೊಸಳೆ ಪ್ರತ್ಯಕ್ಷ್ಯದಿಂದ ಸುತ್ತಲಿನ ರೈತರು, ನಿವಾಸಿಗಳು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು.
ಬೆಳಿಗ್ಗೆಯಿಂದ ಬಲೆ ಬಳಸಿ ಕಾರ್ಯಾಚರಣೆ ನಡೆಸಿ ಮರಿ ಮೊಸಳೆ ಹಿಡಿಯಲಾಗಿದೆ. ಸದ್ಯ ದೊಡ್ಡ ಮೊಸಳೆಗಾಗಿ ಹುಡುಕಾಟ ಮುಂದುವರೆದಿದೆ.
ಕಳೆದ ಎಂಟತ್ತು ದಿನಗಳ ಹಿಂದೆ ರಾಜಾಪುರ ಬಡಾವಣೆಯ ಹೊಂಡವೊಂದರಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯೇಕ್ಷವಾಗಿದ್ದು ಜನ ಆತಂಕದಲ್ಲಿದ್ದರು.