minor girl rape-9 ನೇ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿದ ಧಾರುಣ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಬೇಳಕಿಗೆ ಬಂದಿದೆ, ಬಾಲಕಿಯು ಆಳಂದ ತಾಲೂಕಿನ ಗ್ರಾಮವೊದರಲ್ಲಿ ಸಂಬಂಧಿಗಳ ಮನೆಯಲ್ಲಿದ್ದಳು ಹಾಗೂ ಅದೇ ಗ್ರಾಮದಲ್ಲಿರುವ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಳು.
ನವಂಬರ್ 1 ರಂದು, ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಹುಡುಗಿಯು ಬಯಲು ಶೌಚಕೆಂದು ತೆರಳಿದಾಗ ಬಾಲಕಿಯನ್ನು ಅಪ್ರಾಪ್ತ ಬಾಲಕನು ಕಬ್ಬಿನ ಗದ್ದೆಗೆ ಕರೆದಕೊಂಡು ಹೋಗಿ, ಬಾಲಕಿ ಮೇಲೆ ಅತ್ಯಾಚಾರವೆಸಗಿದ ನಂತರ ಬಾಲಕಿ ಧರಿಸಿದ್ದ ವೇಲ್ ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದೆ.
ಬಯಲು ಶೌಚಕ್ಕೆ ತೆರಳಿದ ಮಗಳು ಬಹಳ ಹೊತ್ತಾದರೂ ಇನ್ನೂ ಮನೆಗೆ ಬಾರದ್ದನು ಕಂಡು ಮನೆಯವರು ಘಾಭರಿ ಗೊಂಡು, ಬಾಲಕಿ ಮನೆಗೆ ಬಾರದೇ ಇದ್ದಾಗ, ಬಾಲಕಿಯನ್ನು ಕುಟುಂಬದವರು ಹುಡುಕಾಡಲು ಪ್ರಾರಂಭಿಸಿದ್ದಾರೆ. ಹುಡುಕಾಟದಲ್ಲಿ ಬಾಲಕಿಯ ಚಪ್ಪಲಿಗಳು ಕಬ್ಬಿನ ಗದ್ದೆಯಲ್ಲಿ ಬಿದ್ದಿದನ್ನು ಕಂಡು, ಕಬ್ಬಿನ ಗದ್ದೆ ಹುಡಕಾಟ ನಡೆಸಿದಾಗ, ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ, ಬಾಲಕಿಯ ಶವ ಪತ್ತೆಯಾಗಿದೆ.
ಬಾಲಕಿಯ ದೇಹದ ವಿವಿಧ ಬಾಗಗಳ ಮೇಲೆ ತೆರಚಿದ ಗಾಯಗಳಿದ್ದು ,ಬಾಲಕಿಯ ಮೇಲೆ ಅತ್ಯಾಚಾರವೆಸಗಿ , ಕೊಲೆ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಆರೋಪಿ ಬಾಲಕಿಯ ಗ್ರಾಮದವನೇಯಾಗಿದ್ದು 16 ವರ್ಷದ ಬಾಲಕ ಎಂದು ತನಿಕೆಯ ವೇಳೆ ತಿಳಿದು ಬಂದಿದೆ.
ನಿನ್ನೆ ಮಧ್ಯಾಹ್ನ ಬಾಲಕಿ ಬಯಲು ಶೌಚಕ್ಕೆ ಹೋಗೋದನ್ನು ಗಮನಿಸಿದ್ದ ಬಾಲಕ, ಬಾಲಕಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದ. ನಂತರ ಕಬ್ಬಿನ ಗದ್ದೆಗೆ ಕರೆದಕೊಂಡು ಹೋಗಿ, ಬಲವಂತವಾಗಿ ಅತ್ಯಾಚಾರ ಮಾಡಿ ಈ ವಿಷಯವನ್ನು ಬಾಲಕಿ, ಕುಟುಂಬದವರಿಗೆ ತಿಳಿಸಬಹುದು ಎಂದು ತಿಳಿದು, ಕಲ್ಲಿನಿಂದ ಬಾಲಕಿಯ ಕತ್ತಿಗೆ ಗುದ್ದಿ, ಬಾಲಕಿಯ ವೇಲ್ ನಿಂದಲೇ ಕತ್ತು ಬಿಗಿದು ಕೊಲೆ ಮಾಡಿದ್ದಾನೆ . ಕೃತ್ಯಗೈದ ನಂತರ ತನ್ನ ಪಾಡಿಗೆ ತಾನು ಮನೆಗೆ ಬಂದು ಸುಮ್ಮನಾಗಿದ್ದಾನೆ.
ವಿಷಯ ತಿಳಿದು ಪ್ರಕ್ರಣ ಧಾಕಲಿಸಿಕೊಂಡು ಪ್ರಕರಣವನ್ನು ಭೇದಿಸಲು ಮುಂದಾದ ಕಲಬುರಗಿ ಪೊಲೀಸ್ ಠಾಣೆಯ ಎಸ್ಪಿ ಇಶಾ ಪಂತ್ ವಿಶೇಷ ತಂಡವನ್ನು ರಚಿಸಿದ್ದಾರೆ. ವಿಶೇಷ ತಂಡವು ಅನುಮಾನಾಸ್ಪದ ಕೆಲ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಾಲಕಿ ವಾಸವಿದ್ದ ಗ್ರಾಮದ 16 ವರ್ಷದ ಬಾಲಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಸದ್ಯ ಕೃತ್ಯ ನಡೆಸಿದ ಆರೋಪಿಯನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪೊಲೀಸರು ಪ್ರಕರಣ ನಡೆದು 24 ಗಂಟೆ ಒಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ರಾಪ್ತ ಬಾಲಕ ಐಟಿಐ ಓದುತ್ತಿದ್ದು ಅಪ್ರಾಪ್ತ ಬಾಲಕ ಮೊಬೈಲ್ ಅಶ್ಲಿಲ್ ವಿಡಿಯೋ ದಾಸನಾಗಿದ್ದು ಸದಾ ಅಶ್ಲೀಲ ವಿಡಿಯೋ ನೋಡುತ್ತಿದ್ದ ನಂತೆ ನಿನ್ನೆ ಅಪ್ರಾಪ್ತ ಬಾಲಕಿ ಒಂಟಿಯಾಗಿರುವುದು ಕಂಡು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ.
Kalburgi rape: minor girl was raped in kalburgi alanda