ಬೆಂಗಳೂರು : ನಗರದ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಇಂದು ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದಾರೆ. ಕಮಲ್ ಪಂತ್ ಅವರಿಗೆ ನಿರ್ಗಮಿತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅಧಿಕಾರ ಹಸ್ತಾಂತರಿಸಿದರು. ಈ ಕ್ಷಣಕ್ಕೆ ಕಮಲ್ ಪಂತ್ ಕುಟುಂಬಸ್ಥರೂ ಸಾಕ್ಷಿಯಾದರು.
ಕಮಲ್ ಪಂತ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಕ್ಷಣದಲ್ಲಿ ಕೆಎಸ್‌ಆಪಿ ಸಿಬ್ಬಂದಿ ಗಾರ್ಡ್ ಆಫ್ ಆನರ್ ನೀಡಿದರು. ಈ ವೇಳೆ ನಗರದ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ನೂತನ ಪೊಲೀಸ್ ಆಯುಕ್ತರು, ‘ಇಂದು ನಾನು ಬೆಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರ ಕೊಟ್ಟ ಈ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ. ಮಹಿಳೆಯರು, ಮಕ್ಕಳು, ವೃದ್ಧರ ರಕ್ಷಣೆ ನಮ್ಮ ಹೊಣೆ’ ಎಂದು ಜನರಿಗೆ ಅಭಯ ನೀಡಿದರು.