144 ಸೆಕ್ಷನ್ ಜಾರಿಯಾಗಿರುತ್ತೆ : ಸಾರಿಗೆ ನೌಕರರಿಗೆ ಕಮಲ್ ಪಂತ್ ( Kamal Pant ) ಎಚ್ಚರಿಕೆ
ಬೆಂಗಳೂರು : ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
144 ಸೆಕ್ಷನ್ ಜಾರಿಯಾಗಿರುತ್ತೆ . ಯಾವುದೇ ಸಾರಿಗೆ ನೌಕರರ ಪ್ರತಿಭಟನೆ ಅವಕಾಶ ಇಲ್ಲ. ಕೋವಿಡ್ ನಿಯಮ ಜಾರಿಯಲ್ಲಿರಲಿದೆ.
ಎಲ್ಲರೂ ಕೋವಿಡ್ ನಿಯಮ ಪಾಲಿಸಬೇಕು. ಸಾರಿಗೆ ನೌಕರರ ಪ್ರತಿಭಟನೆ ಮಾಡಿದ್ರೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಲಲಾಗುವುದು.
144 ಸೆಕ್ಷನ್ ಜಾರಿ ಇರುತ್ತೆ ಯಾರಾದ್ರು ಗುಂಪು ಸೇರಿದ್ರೇ ಕ್ರಮ ತೆಗೆದುಕೊಳ್ತೇವೆ ಎಂದು ಕಮಲ್ ಪಂತ್ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ನೌಕರರು ಪ್ರತಿಭಟನೆ ನಡೆಸಿದ್ರೆ,ಕೂಡಲೇ ಬಂಧಿಸಲಾಗುವುದು.
ಪ್ರತಿಭಟನೆ ಮಾಡುವವರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡೆಸಲಾಗುವುದು ಎಂದು ಸಾರಿಗೆ ನೌಕರರಿಗೆ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
