Hijab Controvercy : ಯಾರು ಕೂಡ ಗುಂಪು ಸೇರುವಂತ್ತಿಲ್ಲ : ಕಮಲ್ ಪಂಥ್
ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಹಿನ್ನಲೆ, ನಗರದಲ್ಲಿ ಕಟ್ಟೇಚ್ಚರಕ್ಕೆ ಪೊಲೀಸ್ ಕಮೀಷನರ್ ಕಮಲ್ ಪಂಥ್ ಅವರು ಸೂಚನೆ ನೀಡಿದ್ಧಾರೆ.. ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು ಬೆಂಗಳೂರಿನಲ್ಲಿ ಸೂಕ್ತ ಭದ್ರತೆಯನ್ನು ತೆಗೆದುಕೊಳ್ಳಲಾಗಿದೆ. ಶಾಲಾ ಕಾಲೇಜು ಬಳಿ ಸೂಕ್ತ ಭದ್ರತೆ ತೆಗೆದುಕೊಳ್ಳಲಾಗಿದೆ.
ಪೊಲೀಸರು ಶಾಲಾ ಕಾಲೇಜು ಬಳಿ ಗಸ್ತು ತಿರುಗುತ್ತಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರು ಕೂಡ ಗುಂಪು ಸೇರುವಂತ್ತಿಲ್ಲ. ಯಾರಾದರು ಗಲಾಟೆ ಮಾಡಿದರೇ ಅವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.
ಶಾಲಾ ಕಾಲೇಜುಗಳ ಬಳಿ ಸೆಕ್ಷನ್ 144 ಜಾರಿಯಾಗಿದೆ.. ಶಾಲಾ ಕಾಲೇಜುಗಳ ಆಡಳಿತದ ಜೊತೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ..








