ಈ ಬಾರಿ ಕಂಬಳ ಕ್ರೀಡೆಯಲ್ಲಿ 140 -150 ಜತೆ ಕೋಣಗಳು ಬಾಗಿ
ಮಂಗಳೂರು: ಕರಳಾವಳಿಯ ಅತ್ಯಂತ ಜನಪ್ರೀಯ ಕ್ರೀಡೆ ಕಂಬಳವನ್ನು, ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ ಆಯೋಜಿಸಲಾಗುತ್ತಿದ್ದು, ಈ ಬಾರಿ ಈ ಸ್ಪರ್ಧೆಯಲ್ಲಿ 140-150 ಜತರ ಕೋಣಗಳು ಬಾಗಿಯಾಗಲಿವೆ.
ಕರವಾಳಿಯ ಹಳ್ಳಿಗಳಲ್ಲಿ ಮಾತ್ರ ಸೀಮಿತವಾಗಿ ಕಂಬಳವನ್ನು, ನಗರದಲ್ಲಿ ಸ್ಪರ್ಧೆಯಂತೆ ಮುಕ್ತವಾಗಿ ಆಯೋಜಿಸಲಾಗುತ್ತಿದೆ. ಈ ಕಂಬಳವನ್ನು ವೀಕ್ಷಿಸಲು ಅಸಂಖ್ಯೆ ಜನರು ಆಗಮಿಸುತ್ತಾರೆ. ಅದರಲ್ಲೂ ವಿದೇಶಿಗರು ಕಂಬಳಕ್ಕೆ ಫಿದಾ ಆಗಿದ್ದಾರೆ.
ಈ ಬಾರಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಂಗಳೂರು ಕಂಬಳ ಆಯೋಜನೆಗೊಂಡಿದೆ. ಕೃಷಿಯ ಅವಿಭಾಜ್ಯ ಅಂಗವಾಗಿರುವ ಕಂಬಳ ಸಾಮಾನ್ಯವಾಗಿ ಗದ್ದೆಯಲ್ಲಿ ನಡೆಯುತ್ತದೆ. ಬಳಿಕ ಅದೇ ಗದ್ದೆಯಲ್ಲಿ ಸುಗ್ಗಿಯ ಭತ್ತದ ಬೆಳೆ ಬೆಳೆಯಲಾಗುತ್ತದೆ.
ಪ್ರಸ್ತುತ ಮಂಗಳೂರು ಕಂಬಳದಲ್ಲಿ ವಿಶೇಷವಾಗಿ ಕೃತಕವಾಗಿ ರೂಪಿಸಿರುವ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಕೋಣಗಳನ್ನು ಓಡಿಸಲಾಗುತ್ತಿದೆ.