ಇಂದಿನಿಂದ ಮಂಗಳೂರು ರಾಮ ಲಕ್ಷ್ಮಣ ಜೋಡುಕೆರೆ ಕಂಬಳಕ್ಕೆ ಚಾಲನೆ…
ಮಂಗಳೂರು ನಗರದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿರುವ ಕ್ಯಾಪ್ಟನ್ ಬೃಜೇಶ್ ಚೌಟ ನೇತೃತ್ವದ 6 ನೇ ವರ್ಷದ ರಾಮ ಲಕ್ಷ್ಮಣ ಜೋಡುಕೆರೆ ಕಂಬಳ ಈ ಬಾರಿ ಜನವರಿ 22 ಮತ್ತು 23 ರಂದು ನಡೆಯಲಿದೆ.
ಕಂಬಳದಲ್ಲಿ ಸುಮಾರು 150 ಜತೆ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾಬೃಜೇಶ್ ಚೌಟ ತಿಳಿಸಿದ್ದಾರೆ.
ಆಧುನಿಕ ರೀತಿಯ ಜೊತೆಗೆ ಸಂಪ್ರದಾಯಕ್ಕೆ ಒತ್ತು ಕೊಟ್ಟುಈ ಬಾರಿ ಕಂಬಳ ಸ್ಪರ್ದೆ ಆಯೋಜಿಸಲಾಗಿದೆ. ಕಂಬಳ ಸ್ಪರ್ದೆ ಆರಂಭಕ್ಕೂ ಮುನ್ನ ಹಿರಿಯ ಕೋಣಗಳನ್ನ ಕೆರೆಗೆ ಇಳಿಸಲಾಗುತ್ತದೆ. 150 ಕ್ಕೂ ಅಧಿಕ ಬಹುಮಾನ ಗೆದ್ದಿರುವ ಚನ್ನಹಾಗೂ ಬೊಳ್ಳೆ ಈ ಕಂಬಳದ ವಿಶೇಷ ಆಕರ್ಷಣೆಯಾಗಲಿದ್ದಾರೆ.
ನೇಗಿಲು ಹಿರಿಯ ಹಾಗು ಕಿರಿಯ, ಹಗ್ಗ ಹಿರಿಯ ಹಾಗು ಕಿರಿಯ, ಕನಹಲಕೆ ಅಡ್ಡಹಲಗೆ ಎಂಬ ಆರು ವಿಭಾಗಗಳಲ್ಲಿ ಸ್ಪರ್ದೆ ನಡೆಯಲಿದೆ. ಕಂಬಳ ಉದ್ಘಾಟನೆಗೆ ಸಚಿವರು ಶಾಸಕರು ಸೇರಿದಂತೆ ಚಿತ್ರನಟರು ಪಾಲ್ಗೊಳ್ಳಲಿದ್ದಾರೆ.
Kambala: Mangalore Rama Lakshman Jodukere Kambala from today…