ಕನ್ನಡ ಅರ್ಥ ಆಗುತ್ತೆ, ಸ್ವಲ್ಪ ಸ್ವಲ್ಪ ಮಾತಾಡ್ತೀನಿ : ವಿರಾಟ್ ಕೊಹ್ಲಿ
ಮುಂಬೈ : ನಿಮಗೆ ಕನ್ನಡ ಮಾತನಾಡಲು ಮತ್ತು ಅರ್ಥವಾಗುತ್ತದೆಯೇ ಎಂದು ಅಭಿಮಾನಿ ಕೇಳಿದ ಪ್ರಶ್ನೆ ಕೊಹ್ಲಿ ಕೊಟ್ಟ ಉತ್ತರಕ್ಕೆ ಕನ್ನಡಿಗರು ಫುಲ್ ಪಿಧಾ ಆಗಿದ್ದಾರೆ.
ಕರ್ನಾಟಕದಲ್ಲೇ ಹುಟ್ಟಿ, ಇಲ್ಲೇ ಬೆಳೆದು ಕನ್ನಡ ಗೊತ್ತಾ ಅಂತಾ ಕೇಳಿದಾಗ ಇಲ್ಲ ನನಗೆ ಕನ್ನಡ ಗೊತ್ತಿಲ್ಲ ಅನ್ನೋ ಸ್ಟಾರ್ ಗಳು ನಮ್ಮಲ್ಲಿದ್ದಾರೆ.
ಆದ್ರೆ ಕನ್ನಡ ಬರುತ್ತಾ ಅಂತಾ ವಿರಾಟ್ ಕೊಹ್ಲಿ ಅವರನ್ನ ಪ್ರಶ್ನಿಸಿದಾಗ ಅವರು’ ಸ್ವಲ್ಪ ಸ್ವಲ್ಪ ಮಾತನಾಡುತ್ತೇನೆ. ಆದರೆ ಅರ್ಥವಾಗುತ್ತದೆ ಎಂದಿದ್ದಾರೆ. ಇದು ಈಗ ಕನ್ನಡಿಗರ ಹೃದಯ ಗೆದ್ದಿದೆ.
ಇಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಗೆ, ಅಭಿಮಾನಿಯೊಬ್ಬರು ಧೋನಿ ಮತ್ತು ನಿಮ್ಮ ನಡುವಿನ ಬಾಂಧವ್ಯವನ್ನು ಎರಡು ಪದಗಳಲ್ಲಿ ಹೇಳಿ ಎಂದು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರಿಸಿ ಕೊಹ್ಲಿ, ಧೋನಿ ಎಂದರೆ ನಂಬಿಕೆ ಮತ್ತು ಗೌರವ ಎಂದಿದ್ದಾರೆ.
ಬಳಿಕ ಅಭಿಮಾನಿಗಳು ನೀವು ಆರ್ಸಿ ಬಿ ತಂಡದಲ್ಲಿ ಒಬ್ಬ ಅತ್ಯುತ್ತಮ ಆಟಗಾರ, ಒಬ್ಬ ಬುದ್ಧಿವಂತ ಆಟಗಾರ ಮತ್ತು ಒಬ್ಬ ನಾಚಿಕೆ ಸ್ವಭಾವದ ಆಟಗಾರರನ್ನು ಗುರುತಿಸಬೇಕು ಎಂದಿದ್ದಾರೆ.
ಇದಕ್ಕೆ ಕೊಹ್ಲಿ, ಅತ್ಯುತ್ತಮ ಆಟಗಾರ ಚಹಲ್, ಬುದ್ಧಿವಂತ ಆಟಗಾರ ಎಬಿಡಿ, ನಾಚಿಕೆ ಸ್ವಭಾವದ ಆಟಗಾರ ಕೈಲ್ ಜೇಮಿಸನ್ ಎಂದು ಉತ್ತರಿದ್ದಾರೆ.