Kannada Rajyotsava | ನಾಡಿನ ಸಮಸ್ತ ಜನತೆಗೆ ಸಿಎಂ ಸಂದೇಶ
ಬೆಂಗಳೂರು : ಇಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂದೇಶ ನೀಡಿದ್ದಾರೆ.
ನವೆಂಬರ್ 1 ಕನ್ನಡಿಗರಿಗೆ ಅತ್ಯಂತ ಸಂಭ್ರಮ ಹಾಗೂ ಸಂತೋಷದ ದಿನ.
ಏಕೀಕರಣದ ಮಂತ್ರದೊಂದಿಗೆ ಭಾಷಾ ಸೂತ್ರದಡಿ ಮುಂಬೈ, ನಿಜಾಮ್, ಮದ್ರಾಸ್ ಪ್ರಾಂತ್ಯಗಳಲ್ಲಿ ನೆಲೆಸಿದ್ದ ಕನ್ನಡಿಗರನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮೈಸೂರು ರಾಜ್ಯವಾಗಿದ್ದ ರಾಜ್ಯವನ್ನು 1972ರಲ್ಲಿ ಕರ್ನಾಟಕವಾಗಿಸಿದ ದೇವರಾಜ ಅರಸು ಅವರು ಕನ್ನಡಿಗರೆಲ್ಲರೂ ಒಂದು ಎಂಬ ಭಾವನೆಯನ್ನು ಮೂಡಿಸಿದ್ದಾರೆ.
ಇಂದು 67ನೇ ರಾಜ್ಯೋತ್ಸವ ಆಚರಿಸುತ್ತಿರುವ ಕನ್ನಡ ನಾಡು ಜ್ಞಾನ, ವಿಜ್ಞಾನ, ಕೈಗಾರಿಕೆ, ಕೃಷಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.