Kantara : FIR ರದ್ದು ಮಾಡುವಂತೆ ಚೇತನ್ ಅಹಿಂಸಾ ಮನವಿ ತಿರಸ್ಕರಿಸಿದ ಹೈಕೋರ್ಟ್
ಕಾಂತಾರ ಸಿನಿಮಾ ಕುರಿತಂತೆ ನಟ ಚೇತನ್ ಅಹಿಂಸಾ ನೀಡಿದ್ದ ಹೇಳಿಕೆ ಕುರಿತಂತೆ ದಾಖಲಾಗಿದ್ದ FIR ರದ್ದು ಮಾಡುವಂತೆ ಮನವಿ ಮಾಡಿದ್ದ ನಟ ಚೇತನ್ ಮನವಿಯನ್ನ ಹೈಕೋರ್ಟ್ ತಿರಸ್ಕರಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿತೋರಿಸಲಾಗಿದ್ದ, ಭೂತಕೋಲದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಚೇತನ್ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆನಂತರವು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡೇ ಬಂದಿದ್ದರು ಚೇತನ್. ಅಲ್ಲದೇ ತಮ್ಮ ವಿರುದ್ಧ ದಾಖಲಾಗಿರೋ FIR ರದ್ದು ಮಾಡಬೇಕು ಎಂದು ಹೈಕೋರ್ಟ್ ಮೋರೆ ಹೋಗಿದ್ದರು.
ಇದೀಗ FIR ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ. ಈ ಅರ್ಜಿ ವಿಚಾರಣೆಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದ ಪೀಠ, ಪ್ರಕರಣವಿನ್ನೂ ತನಿಖೆ ಹಂತದಲ್ಲಿ ಇರುವುದರಿಂದ ಈ ಹಂತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು ಎಂದು ಅರ್ಜಿ ವಜಾಗೊಳಿಸಿದೆ.
Kantara: High Court rejects Chetan Ahimsa’s plea to quash FIR