BJP | ಸಿದ್ದರಾಮೋತ್ಸವ, ಕಾಗೆಯನ್ನು ರಾಜಹಂಸವಾಗಿಸುವ ಪ್ರಯತ್ನ
ಬೆಂಗಳೂರು : ದೇಶ ಸ್ವಾತಂತ್ರ್ಯಗೊಂಡ ವರ್ಷದಲ್ಲಿ ಸಿದ್ದರಾಮಯ್ಯ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮೋತ್ಸವವನ್ನು ಅಮೃತಮಹೋತ್ಸವವಾಗಿಸಲು ಸಾಧ್ಯವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
ಸಿದ್ದರಾಮೋತ್ಸವದ ಬಗ್ಗೆ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ಬಿಜೆಪಿ, ಸಿದ್ದರಾಮೋತ್ಸವಕ್ಕೆ ನನನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ನಾನು ಅತಿಥಿಯಾಗಿ ಭಾಗವಹಿಸುತ್ತೇನೆ – ಡಿಕೆಶಿ ಮೂಲ ಕಾಂಗ್ರೆಸ್ಸಿಗರನ್ನು ಪಕ್ಷದ ಮನೆಯಲ್ಲೇ ಅತಿಥಿಯಾಗಿ ಮಾಡುವ ಯೋಜನೆಯೇ ಸಿದ್ದರಾಮೋತ್ಸವ! ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ನಡು ನೆತ್ತಿಯ ಮೇಲೆ ಕಡುಕತ್ತಿಯ ಪ್ರಹಾರದ ಎಚ್ಚರಿಕೆ ಇದು..

ಪಕ್ಷ ಪೂಜೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಲುವು, ಇತರರಿಗೆ ಇಲ್ಲದಂತಿದೆ. ಎಲ್ಲರಿಗೂ ವ್ಯಕ್ತಿ ಪೂಜೆಯೇ ಬೇಕು. ವ್ಯಕ್ತಿ ಪೂಜೆಯ ಪ್ರಸಾದ, ನೈವೇದ್ಯ ಎಲ್ಲವೂ ಬೇಕು. ಕೆಪಿಸಿಸಿ ಅಧ್ಯಕ್ಷರಿಗೆ ಚಿಪ್ಪು ಮಾತ್ರ!ಡಿಕೆಶಿ ಈಗ ತನ್ನ ಮನೆಯಲ್ಲೇ ಅತಂತ್ರರಾಗುತ್ತಿದ್ದಾರೆ!
ಕಾಂಗ್ರೆಸ್ ನಾಯಕರ ಬೌದ್ಧಿಕ ದಾರಿದ್ರ್ಯಕ್ಕೆ ಶೇಮ್ ಶೇಮ್!ದೇಶದ ಸ್ವಾತಂತ್ರ್ಯಕ್ಕಾಗಲಿ, ಯಾವುದೇ ಜನಪರ ಹೋರಾಟದಲ್ಲಾಗಲಿ ಭಾಗಿಯಾಗದ ಶುದ್ಧ ಅಧಿಕಾರದಾಹಿಯ ಜನ್ಮದಿನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಜೊತೆಗೆ ಸಮೀಕರಿಸಲು ಹೊರಟವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತೇ?
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಹೊರಟಿದ್ದರು. ಎಷ್ಟೇ ನಿರ್ಬಂಧ ವಿಧಿಸಿದ್ದರೂ ಲಕ್ಷ್ಮಣ ರೇಖೆ ದಾಟಿ ಹೊರ ಬಂದರು.
ಈಗ ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಲು ಸಿದ್ದರಾಮೋತ್ಸವ ಆಯೋಜಿಸುತ್ತಿದೆಯೇ?
ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆಯೇ?#ಕಾಂಗ್ರೆಸ್‌ಹಾಸ್ಯೋತ್ಸವ
— BJP Karnataka (@BJP4Karnataka) July 14, 2022
ಸ್ವಾತಂತ್ರ್ಯದ ಅಮೃತ ಮಹೋತ್ಸವ ದೇಶದ ಹಬ್ಬ. ಇಂಥಹ ಕಾರ್ಯಕ್ರಮದ ಜೊತೆಗೆ ಸಿದ್ದರಾಮೋತ್ಸವ ಮಾಡಿ ಎಂದು ಸಲಹೆ ನೀಡಿದ್ಯಾರು? ದೇಶ ಸ್ವಾತಂತ್ರ್ಯಗೊಂಡ ವರ್ಷದಲ್ಲಿ ಸಿದ್ದರಾಮಯ್ಯ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮೋತ್ಸವವನ್ನು ಅಮೃತಮಹೋತ್ಸವವಾಗಿಸಲು ಸಾಧ್ಯವೇ? ಇದು ಕಾಗೆಯನ್ನು ರಾಜಹಂಸವಾಗಿಸುವ ಪ್ರಯತ್ನ!
ಕಾಂಗ್ರೆಸ್ ಕಟ್ಟಾಳುವಾಗಿದ್ದರೂ 2 ವರ್ಷ ಪೂರೈಸಿದ್ದಕ್ಕಾಗಿ ವೈಯಕ್ತಿಕ ವಿಜ್ರಂಭಣೆಗೆ ಹೊರಟ ಮಾಜಿ ಸಿಎಂ ಬಂಗಾರಪ್ಪರನ್ನು ಮನೆಗೆ ಕಳುಹಿಸಲಾಗಿತ್ತು.ಅದೇ ಪಕ್ಷವಿಂದು ವ್ಯಕ್ತಿ ವಿಜ್ರಂಭಣೆಯ ಕಾರ್ಯಕ್ರಮವನ್ನು ಪಕ್ಷದ ವೇದಿಕೆಯಲ್ಲಿ ನಡೆಸಿ ಎನ್ನುತ್ತಿದೆ.ಇದು ಬೌದ್ಧಿಕ ದಾರಿದ್ರ್ಯವೋ, ಅಧಃಪತನಗೊಂಡ ನಾಯಕತ್ವವೋ?
ಜನ್ಮ ದಿನಾಂಕವೇ ಗೊತ್ತಿಲ್ಲ ಎನ್ನುತ್ತಿರುವ ಸಿದ್ದರಾಮಯ್ಯ ಅವರು 75 ನೇ ಜನ್ಮದಿನೋತ್ಸವಕ್ಕೆ ಒಪ್ಪಿಗೆ ಸೂಚಿಸಿದ್ದೇ ಚೋದ್ಯ. ಅಂದಾಜಿಗೆ ಗುಂಡು ಹೊಡೆದು ಅಮೃತ ಮಹೋತ್ಸವ ಮಾಡಲು ಸಿದ್ದರಾಮಯ್ಯ ಭಜನಾ ಮಂಡಳಿ ಹೊರಟಿದೆ. ಇದು ಕಾಂಗ್ರೆಸ್ ಹೈಕಮಾಂಡನ್ನು ಬೆದರಿಸುವ ತಂತ್ರವೇ?
ಕಾಂಗ್ರೆಸ್ ಕಟ್ಟಾಳುವಾಗಿದ್ದರೂ 2 ವರ್ಷ ಪೂರೈಸಿದ್ದಕ್ಕಾಗಿ ವೈಯಕ್ತಿಕ ವಿಜ್ರಂಭಣೆಗೆ ಹೊರಟ ಮಾಜಿ ಸಿಎಂ ಬಂಗಾರಪ್ಪರನ್ನು ಮನೆಗೆ ಕಳುಹಿಸಲಾಗಿತ್ತು.
ಅದೇ ಪಕ್ಷವಿಂದು ವ್ಯಕ್ತಿ ವಿಜ್ರಂಭಣೆಯ ಕಾರ್ಯಕ್ರಮವನ್ನು ಪಕ್ಷದ ವೇದಿಕೆಯಲ್ಲಿ ನಡೆಸಿ ಎನ್ನುತ್ತಿದೆ.
ಇದು ಬೌದ್ಧಿಕ ದಾರಿದ್ರ್ಯವೋ, ಅಧಃಪತನಗೊಂಡ ನಾಯಕತ್ವವೋ?#ಕಾಂಗ್ರೆಸ್‌ಹಾಸ್ಯೋತ್ಸವ
— BJP Karnataka (@BJP4Karnataka) July 14, 2022
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಹೊರಟಿದ್ದರು. ಎಷ್ಟೇ ನಿರ್ಬಂಧ ವಿಧಿಸಿದ್ದರೂ ಲಕ್ಷ್ಮಣ ರೇಖೆ ದಾಟಿ ಹೊರ ಬಂದರು. ಈಗ ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಲು ಸಿದ್ದರಾಮೋತ್ಸವ ಆಯೋಜಿಸುತ್ತಿದೆಯೇ? ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆಯೇ?
ಸಂಸದ ಡಿಕೆ ಸುರೇಶ್ ಅವರು, ಸಿದ್ದರಾಮೋತ್ಸವ ಯಾರಿಗೋ ನಾಯಕತ್ವ ನೀಡಿದಂತೆ ಬಿಂಬಿತವಾಗಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ.ಸಿದ್ದರಾಮೋತ್ಸವ ಕಾಂಗ್ರೆಸ್ ನಿರ್ನಾಮಕ್ಕೆ ಮುನ್ನುಡಿ ಬರೆಯಲಿದೆ ಎಂದು ಬಿಜೆಪಿ ಬರೆದುಕೊಂಡಿದೆ.