ಕರ್ನಾಟಕ ಬಜೆಟ್ ಲೈವ್ – ಸಂಸ್ಕೃತಿ ಪರಂಪರೆ ರಕ್ಷೆಣೆಗೆ 3010 ಕೋಟಿ ರೂ
ಬಜೆಟ್ ನ ಪ್ರಮುಖ ಅಂಶಗಳು ಇಂತಿವೆ..
ಕರ್ನಾಟಕ ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ತಮ್ಮ ಮೊದಲ ಬಜೆಟ್ ಭಾಷಣ ಆರಂಭಿಸಿದರು. ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಕೋವಿಡ್-19 ಪ್ರಭಾವವನ್ನು ಅವರು ಒಪ್ಪಿಕೊಂಡಿದ್ದಾರೆ. ಅವರು ಪ್ರಧಾನ ಮಂತ್ರಿಯವರ ಮಾರ್ಗದರ್ಶನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಉದ್ಯೋಗ ಶಿಕ್ಷಣ ಮತ್ತು ಸಬಲೀಕರಣ ಮೂರು ಮೌಲ್ಯಗಳನ್ನು ಸರ್ಕಾರ ಅನುಸರಿಸಲಿದೆ ಎಂದು ಸಿಎಂ ಹೇಳಿದರು.
ಸಂಸ್ಕೃತಿ ಪರಂಪರೆ ರಕ್ಷೆಣೆಗೆ 3010 ಕೋಟಿ ರ
2,65,720 ಕೋಟಿ ರೂ. ಗಾತ್ರದ ಬಜೆಟ್ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಬಜೆಟ್ ಮುಖ್ಯಾಂಶಗಳು
– ರೈತರಿಗೆ ಡಿಸೇಲ್ ಬಳಕೆಗೆ ಸಬ್ಸಿಡಿ.
– 7 ಹೊಸ ವಿವಿ ಘೋಷಣೆ. ಗೋವುಗಳ ದತ್ತು ಪಡೆಯಲು ಪುಣ್ಯ ಕೋಟಿ ಯೋಜನೆ
– ಅಕ್ರಮ ಸಕ್ರಮ ಯೋಜನೆ ಘೋಷಣೆ. ಬಿ ಖಾತೆಯಿಂದ ಎ ಖಾತೆ ವರ್ಗಾವಣೆಗೆ ಅವಕಾಶ
– ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ
– ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿಸ್ತರಣೆ
– 200 ಕನ್ನಡ ಚಲನ ಚಿತ್ರಗಳಿಗೆ ಸಹಾಯಧನ ಘೋಷಣೆ
ಧಾರ್ಮಿಕ ದತ್ತಿ ಇಲಾಖೆ ತಸ್ತೀಕ್ 60, ಸಾವಿರ ರೂ ಗಳಿಗೆ ಹೆಚ್ಚಳ. ಮುಜರಾಯಿ ದೇವಸ್ಥಾನ ಗಳಿಗೆ ಸ್ವಾಯತ್ತ ತೆ ನೀಡಲು ಕ್ರಮ
– ಕೆ ಎಸ್ ಆರ್ ಪಿ ಮಹಿಳಾ ಕಂಪನಿ ಆರಂಭ. ಕಾರಾಗೃಹದಲ್ಲಿ ಅತ್ಯಾಧುನಿಕ ಮಾದರಿಯ ಉಪಕರಣ ಅಳವಡಿಕೆ
– ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನೆರವು