ಮಕ್ಕಳ ಲಸೀಕಾಕರಣಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ..

1 min read

ಮಕ್ಕಳ ಲಸೀಕಾಕರಣಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ..

ಇಂದಿನಿಂದ  ದೇಶಾದ್ಯಂತ  15 ರಿಂದ 18 ವರ್ಷದ ಮಕ್ಕಳಿಗೆ ಕರೋನಾ ಲಸಿಕೆಯನ್ನ ನೀಡಲು ಪ್ರಾರಂಭಿಸಲಾಗಿದೆ.  ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರೋನಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಂಗಳೂರಿನ  ಗೋವಿಂದರಾಜನಗರದ ಮೂಡನಪಾಳ್ಯದಲ್ಲಿರುವ ಬಿಬಿಎಂಪಿ ಶಾಲೆಗೆ ಆಗಮಿಸಿ  ಮಕ್ಕಳ ಜೊತೆಯಲ್ಲಿಯೇ ನಿಂತು ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ನಂತರ ಮಾತನಾಡಿದ ಸಿ ಎಂ “ಲಸಿಕಾ ಅಭಿಯಾನದಲ್ಲಿ ದೇಶ ದೊಡ್ಡ  ಸಾದನೆ ಮಾಡಿದೆ. ನಮ್ಮ ರಾಜ್ಯದಲ್ಲಿ 47 ಲಕ್ಷ ಮಕ್ಕಳು 15 ರಿಂದ 18 ವರ್ಷದ ಒಳಗಿನವರಿದ್ದಾರೆ  ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ಆಗಬೇಕಿದೆ.  ಕೋವಿಡ್ 19  ನಿರ್ನಾಮ ಮಾಡಬೇಕೆಂದರೆ  ಪ್ರತಿಯೊಬ್ಬರು ಲಸಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಬೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆ ಇದೆ.  ಕಾಲಕ್ಕೆ ತಕ್ಕಂತೆ ಮುಖ್ಯಮಂತ್ರಿಗಳು ತೆಗೆದುಕೊಂಡ ನಿರ್ಧಾರದಿಂದ  ಇದು ಕಡಿಮೆ ಆಗಿದೆ.  ಈಗಾಗಲೇ ರಾಜ್ಯದಲ್ಲಿ    8 ಕೋಟಿ 65 ಲಕ್ಷ ಲಸಿಕೆ ನೀಡಿದ್ದೇವೆ.  ಇಡೀ ದೇಶದಲ್ಲಿ 145 ಕೋಟಿ ಲಸಿಕೆ ನೀಡಿದ್ದೇವೆ. ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದರು.

ಇಂದಿನಿಂದ  ದೇಶಾದ್ಯಂತ  15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ….

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd