karnataka election 2023 | ಕಾಂಗ್ರೆಸ್ 40 ಸೀಟ್ ದಾಟಲ್ಲ, ಜೆಡಿಎಸ್ ಗೆ 20 ಸೀಟ್ ಬರಲ್ಲ
ರಾಯಚೂರು : ಕರ್ನಾಟಕದಲ್ಲಿ ಕಾಂಗ್ರೆಸ್ 40 ಸೀಟ್ ದಾಟಲ್ಲ, ಜೆಡಿಎಸ್ ಗೆ 20 ಸೀಟ್ ಬರಲ್ಲ ಎಂದು ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ಶಿವನಗೌಡ ನಾಯಕ್ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿರುವ ವಿಚಾರವಾಗಿ ಬಿಜೆಪಿ ಶಾಸಕ ಕೆ.ಶಿವನಗೌಡ ವ್ಯಂಗ್ಯವಾಡಿದ್ದಾರೆ.

ರಾಯಚೂರು ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಕೆ.ಶಿವನಗೌಡ, ಚುನಾವಣೆ ಬಂತು ಅಂದರೇ ಕುಮಾರಸ್ವಾಮಿ ಅಲ್ಲಿ ಇಲ್ಲಿ ಓಡಾಡುತ್ತಾರೆ.
ಅಲ್ಲಿ ಇಲ್ಲಿ ಓಡಾಡಿ ಕಣ್ಣೀರು ಹಾಕಿ ದುಡ್ಡು ಕೀಳುತ್ತಾರೆ. ಇಂತವರ ಗಿಮಿಕ್ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಕುಟುಕಿದ್ದಾರೆ.
ಇನ್ನು ಮುಂದಿನ ಚನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ 40 ಸೀಟ್ ದಾಟಲ್ಲ, ಜೆಡಿಎಸ್ ಗೆ 20 ಸೀಟ್ ಬರಲ್ಲ ಎಂದು ಭವಿಷ್ಯ ನುಡಿದರು.