ADVERTISEMENT
Friday, May 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪ್ರಧಾನ   ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕರ್ನಾಟಕಕ್ಕೆ 642.26 ಕೋಟಿ ಮಂಜೂರು

Namratha Rao by Namratha Rao
January 14, 2022
in Newsbeat, State, ರಾಜ್ಯ
Farmer Saaksha Tv
Share on FacebookShare on TwitterShare on WhatsappShare on Telegram

Related posts

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

May 15, 2026
ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

May 15, 2026

ಪ್ರಧಾನ   ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕರ್ನಾಟಕಕ್ಕೆ 642.26 ಕೋಟಿ ಮಂಜೂರು

ಬೆಂಗಳೂರು,ಜ.13: ಸಂಕ್ರಾಂತಿ ಹಬ್ಬಕ್ಕೆ ಕೃಷಿ ಇಲಾಖೆ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಜಲಾನಯನ ಅಭಿವೃದ್ಧಿ ಇಲಾಖೆಯಡಿ ಪ್ರಧಾನ   ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 642.26 ಕೋಟಿ ಮಂಜೂರಾಗಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಈ ಯೋಜನೆಯಡಿ ಕೇಂದ್ರದಿಂದ ಶೇ.60 ರಾಜ್ಯದಿಂದ ಶೇ.40 ರ ಅನುಪಾತದಲ್ಲಿ ಯೋಜನೆಯ ವೆಚ್ಚವನ್ನು ಭರಿಸಲಾಗುತ್ತಿದ್ದು, ಸಮತಟ್ಟಾದ ಪ್ರದೇಶದ ಪ್ರತಿ ಹೆಕ್ಟೇರ್ ಜಲಾನಯನಗಳ ಉಪಚಾರಕ್ಕೆ 22 ಸಾವಿರ ರೂ. ಗುಡ್ಡಗಾಡು ಪ್ರದೇಶದ ಉಪಚಾರಕ್ಕೆ 28 ಸಾವಿರ ರೂ.ವರೆಗೆ ಅನುದಾನ  ಲಭ್ಯವಾಗಲಿದೆ .ಈ ಯೋಜನೆಯನ್ನು ರಾಜ್ಯದ 2.75 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವನ್ನು ಉಪಚರಿಸಲು ಅನುಮೋದನೆ ನೀಡಲಾಗಿದೆ ಎಂದರು.

ಯೋಜನೆಯ ಮುಖ್ಯ ಉದ್ದೇಶಗಳನ್ನು ವಿವರಿಸಿದ ಸಚಿವರು,ಮಳೆ ನೀರು ಕೊಯ್ಲ ಮೂಲಕ ಮಣ್ಣಿನ ತೇವಾಂಶ ಸಂರಕ್ಷಿಸುವುದು. ಪರ್ಯಾಯ ಬೆಳೆ ವ್ಯವಸ್ಥೆಗಳು,ಹವಾಮಾನ ವೈಪರೀತ್ಯ ಮತ್ತು ಬರಗಾಲದ ಅಪಾಯಗಳನ್ನು ಎದುರಿಸುವುದು,ಅಂತರ್ಜಲ ಹೆಚ್ಚಿಸಲು ಅನುಕೂಲವಾಗುತ್ತದೆ.  ಆಸ್ತಿರಹಿತರಿಗೆ ಸ್ವಸಹಾಯ ಗುಂಪುಗಳನ್ನು ರಚಿಸಿ (SHGs) ಉತ್ತೇಜಿಸುವುದು

ವಿಕಲಚೇತನರು ಮತ್ತು ಮಹಿಳೆಯರಿಗೆ ಅಭಿವೃದ್ಧಿಪಡಿಸಿದ ಭೂಮಿ, ನೀರು ಮತ್ತು ಜೀವರಾಶಿ ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮಾನ ಪ್ರವೇಶ ಮತ್ತು ಅವಕಾಶ ಹಾಗೂ ಎಫ್.ಪಿ.ಒ ಬಳಕೆದಾರರ ಗುಂಪುಗಳು ಮುಂತಾದ ವಿವಿಧ ಸಮುದಾಯ ಸಂಸ್ಥೆಗಳಲ್ಲಿ ಈ ವರ್ಗಗಳ ಜನರಿಗೆ ಸದಸ್ಯತ್ವ ನೀಡಲು ಉತ್ತೇಜಿಸುವುದಾಗಿದೆ ಎಂದರು.

ಜಲಾನಯನ ಅಭಿವೃದ್ಧಿ ಇಲಾಖೆಯ ಸಾಧನೆಗಳನ್ನು ಮುಂದುವರೆಸಿ ಮಾತನಾಡಿದ ಬಿ.ಸಿ.ಪಾಟೀಲ್, 2021-22 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ ಸುಜಲ-iii ಯೋಜನೆ ಮಾದರಿಯಲ್ಲಿ ವಿಶ್ವಬ್ಯಾಂಕ್ ಅನುದಾನದ ನೆರವಿನಲ್ಲಿ ಹೊಸ ರಿವಾರ್ಡ್ ( ಕೃಷಿಯ ಸುಸ್ಥಿರತೆಗಾಗಿ ನವೀನ ಅಭಿವೃದ್ಧಿಯ ಮೂಲಕ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವ ಯೋಜನೆ ಜಾರಿಗೊಳಿಸಿ ರಾಜ್ಯದ 21 ಜಿಲ್ಲೆಗಳಲ್ಲಿ 600 ಕೋಟಿ ರೂ.ವೆಚ್ಚದಲ್ಲಿ ವಿಶ್ವಬ್ಯಾಂಕಿನ ಶೇ.70 ರಾಜ್ಯದ ಶೇ.30 ಪಾಲಿನಂತೆ ಯೋಜನೆಯನ್ನು ಮುಂದಿನ 5  ವರ್ಷಗಳ ಕಾಲ ಅನುಷ್ಠಾನಗೊಳಿಸಲಾಗಿದೆ ಎಂದರು.

ಅಲ್ಲದೇ ದೇಶದಲ್ಲಿಯೇ ಕರ್ನಾಟಕ ಕೃಷಿ ಇಲಾಖೆಯ ಜಲಾನಯನ ಇಲಾಖೆಯು ಇತರೆ ರಾಜ್ಯಗಳಿಗೆ ತಾಂತ್ರಿಕ ಸಲಹೆ ನೀಡಲು ಮಾದರಿಯಾಗಿದ್ದು, ಕರ್ನಾಟಕ ರಾಜ್ಯವನ್ನು ಕೇಂದ್ರ ಸರ್ಕಾರ “ಲೈಟ್ ಹೌಸ್” ಎಂದು ಗುರುತಿಸಿರುವುದು ಕರ್ನಾಟಕದ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು.

ರಿವಾರ್ಡ್ ಯೋಜನೆಯಡಿ ಕೈಗೊಳ್ಳುವ ಪ್ರಮುಖ ಚಟುವಟಿಕೆಗಳು:

  • ಈಗಾಗಲೇ ರಾಜ್ಯದ 14 ಲಕ್ಷ ಹೇಕ್ಟೇರ್ ಪ್ರದೇಶದಲ್ಲಿ ೧೧ ಜಿಲ್ಲೆಗಳಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್ಗಳನ್ನು ವಿತರಿಸಲಾಗಿದೆ. ಪ್ರಸ್ತುತ ಹೊಸದಾಗಿ 9 ಜಿಲ್ಲೆಗಳು ಸೇರಿದಂತೆ41 ಲಕ್ಷ ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಭೂ ಸಂಪನ್ಮೂಲ ಸಮೀಕ್ಷೆ( Land Resource Inventory-LRI)ಕೈಗೊಳ್ಳಲಾಗುವುದು.

  • ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್ ಬಳಸುವುದರಿಂದ ರೈತರಿಗೆ ಹಿಡುವಳಿವಾರು ಮಣ್ಣಿನ ಪೋಷಾಕಾಂಶಗಳ ಅನ್ವಯ ನಿರ್ದಿಷ್ಟ್ಟ ತಾಂತ್ರಿಕತೆಗಳ ಶಿಪಾರಸ್ಸುನ್ನು ಕೊಡಲು ಸಹಕಾರಿಯಾಗುತ್ತದೆ.

  • 1 ಲಕ್ಷ ಹೆ. ಜಲಾನಯನ ಪ್ರದೇಶದಲ್ಲಿ (20 ಉಪಜಲಾನಯನಗಳು) ಭೂ-ಸಂಪನ್ಮೂಲ (LRI) ಮತ್ತು ಜಲವಿಜ್ಞಾನ ಅಧ್ಯಯನದ (Hydrology) ಶಿಫಾರಸ್ಸುಗಳನ್ನು ಆದರಿಸಿ ವೈಜ್ಞಾನಿಕವಾಗಿ ಸಂಪೂರ್ಣ ಜಲಾನಯನದ ಉಪಚಾರ ಕೈಗೊಳ್ಳುವುದು.

  • ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆ ಮತ್ತು ಮೌಲ್ಯ ಸರಪಳಿ ಅಭಿವೃದ್ಧಿ

  • ರೈತರಿಗೆ ಸುಧಾರಿತ ಕೃಷಿ-ಹವಾಮಾನ ಸಲಹಾ ಸೇವೆ ಒದಗಿಸುವುದು.

  • ಭಾರತ ದೇಶದಲ್ಲಿಯೇ ಪ್ರಥಮವಾಗಿದೆ ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರು ಸಂಸ್ಥೆಯಲ್ಲಿ ಜಲಾನಯನ ನಿರ್ವಹಣೆ ಕುರಿತು ಅತ್ಯುನ್ನತ ಮಟ್ಟದ ಅಧ್ಯಯನ ಮತ್ತು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.

75- ಅಮೃತ ರೈತ/ಮೀನುಗಾರರ/ನೇಕಾರರ ಉತ್ಪಾದಕರ ಸಂಸ್ಥೆಗಳನ್ನು ರಚಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದಂತೆ  ಜಲಾನಯನ ಅಭಿವೃದ್ಧಿ ಇಲಾಖೆಯಡಿ ಪ್ರಸಕ್ತ ಸಾಲಿನಲ್ಲಿ 250 ಅಮೃತ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸುವ ಗುರಿಯನ್ನು ಹೊಂದಿದ್ದು, ಇಲ್ಲಿಯವರೆಗೆ ವಿವಿಧ ಇಲಾಖೆಗಳ ವತಿಯಿಂದ 178 ಅಮೃತ ಉತ್ಪಾದಕರ ಸಂಸ್ಥೆಗಳನ್ನು ಅಲ್ಪ ಸಮಯದಲ್ಲಿಯೇ ಕ್ರಮವಹಿಸಿ ಪ್ರಗತಿ ಸಾಧಿಸಲಾಗಿದೆ.ಪ್ರತಿ ಅಮೃತ ಉತ್ಪಾದಕರ ಸಂಸ್ಥೆಗೆ 30 ಲಕ್ಷ ರೂ.ನಂತೆ ಒಟ್ಟು 225 ಕೋಟಿ ರೂ. ವೆಚ್ಚದಲ್ಲಿ ಮೂರು ವರ್ಷಗಳಲ್ಲಿ ವೆಚ್ಚ ಭರಿಸಲಾಗುವುದು. ಕೇಂದ್ರ ವಲಯದ 10 ಸಾವಿರ ರೈತ ಉತ್ಪಾದಕರ ಸಂಸ್ಥೆಗಳ ರಚನೆ ಯೋಜನೆಯಡಿ ಇಲಾಖೆಗೆ ನಿಗದಿಪಡಿಸಿರುವ 100 ಉತ್ಪಾದಕರ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 130 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಿ ಪ್ರಗತಿ ಸಾಧಿಸಲಾಗಿದೆ

Tags: AgricultureBC PatilBJPCM Bommai
ShareTweetSendShare
Join us on:

Related Posts

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

by Shwetha
May 15, 2026
0

ರಾಜ್ಯ ರಾಜಕಾರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಶಾಸಕ ಕೆ.ಎನ್. ರಾಜಣ್ಣ ಅವರು ನೀಡಿರುವ ಹೇಳಿಕೆಯೊಂದು ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ದೇಶ ಕಂಡ ದಿವಂಗತ...

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

by Shwetha
May 15, 2026
0

ಉಪ ಚುನಾವಣೆಯಲ್ಲಿ ಜಯಗಳಿಸಿದ ನಾಯಕರು ಗುರುವಾರ ಅಧಿಕೃತವಾಗಿ ಶಾಸಕರಾಗಿ ಪದಗ್ರಹಣ ಮಾಡಿದರು. ಉಮೇಶ್ ಮೇಟಿ ಹಾಗೂ ಸಮರ್ಥ್ ಶಾಮನೂರು ಅವರು ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ...

ರಾಜಕೀಯಕ್ಕಾಗಿ ದೇಶದ ಗೌರವವನ್ನು ಅಡ ಇಡುವುದಿಲ್ಲ, ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಮಾತು

ಕೋರ್ಟ್ ಆದೇಶದಂತೆ GBA ಚುನಾವಣೆ..! ಡಿಕೆ ಶಿವಕುಮಾರ್ ಸ್ಪಷ್ಟನೆ

by Shwetha
May 15, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಪಾಲಿಕೆ ಚುನಾವಣೆಯನ್ನು ಮುಂದೂಡಲಾಗುತ್ತದೆಯೇ ಎಂಬ ಚರ್ಚೆಗಳ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಕೋರ್ಟ್ ನಿರ್ದೇಶನದಂತೆ GBA...

ಫೆಬ್ರವರಿ 16ಕ್ಕೆ ಮತ್ತೊಂದು ‘ಸಿದ್ದರಾಮೋತ್ಸವ’? ಕಾಂಗ್ರೆಸ್ ಒಳರಾಜಕಾರಣಕ್ಕೆ ಮತ್ತೆ ವೇದಿಕೆ

ಹಿಜಾಬ್ ಗೆ ಗ್ರೀನ್ ಸಿಗ್ನಲ್ ಕೇಸರಿ ಶಾಲಿಗೆ ನೋ ಸಿಎಂ ಸಿದ್ದರಾಮಯ್ಯ ಬಿಗ್ ಸ್ಟೇಟ್ ಮೆಂಟ್

by Shwetha
May 15, 2026
0

ರಾಜ್ಯದಲ್ಲಿ ಮತ್ತೆ ಹಿಜಾಬ್ ಮತ್ತು ಸಮವಸ್ತ್ರ ಸಮರ ಮುನ್ನೆಲೆಗೆ ಬಂದಿದೆ. 2022ರ ಹಿಂದಿನ ಸರ್ಕಾರದ ಆದೇಶವನ್ನು ರದ್ದುಗೊಳಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಹೊಸ ಆದೇಶ...

ಸಿದ್ದರಾಮಯ್ಯ ಅವರನ್ನ ಹೆದರಿಸ್ತಿದ್ದಾರೆ, ಡಿಕೆಶಿ ಧಮ್ಕಿ ನಮ್ ಹತ್ರ ನಡೆಯಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗು

ಸಿದ್ದರಾಮಯ್ಯ ಅವರನ್ನ ಹೆದರಿಸ್ತಿದ್ದಾರೆ, ಡಿಕೆಶಿ ಧಮ್ಕಿ ನಮ್ ಹತ್ರ ನಡೆಯಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗು

by Shwetha
May 15, 2026
0

ರಾಜ್ಯ ರಾಜಕೀಯದ ಇಬ್ಬರು ಬದ್ಧ ಎದುರಾಳಿಗಳಾದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವಿನ ವಾಗ್ಯುದ್ಧ ಈಗ ಮತ್ತೊಂದು ಹಂತಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram