ಕರ್ನಾಟಕ ಸರ್ಕಾರದಿಂದ ಸಿಇಟಿ, ನೀಟ್ ಮತ್ತು ಜೆಇಇ ತಯಾರಿಗೆ ಆನ್‌ಲೈನ್ ಕೋಚಿಂಗ್ ಪ್ಲಾಟ್‌ಫಾರ್ಮ್
ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ), ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋಚಿಂಗ್ ಪ್ಲಾಟ್‌ಫಾರ್ಮ್ ಒದಗಿಸುತ್ತಿದ್ದು, ರಾಜ್ಯ ಸರ್ಕಾರವು ಸೋಮವಾರ ‘ಗೆಟ್‌ಸೆಟ್‌ಗೋ’ ( GetCETGo) ಪ್ಲಾಟ್‌ಫಾರ್ಮ್ ಅನ್ನು ಕಳೆದ ವರ್ಷದ ಮಾದರಿಯಲ್ಲಿ ಪ್ರಾರಂಭಿಸಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಿಶೇಷ ಆನ್‌ಲೈನ್ ಕೋಚಿಂಗ್ ಪ್ಲಾಟ್‌ಫಾರ್ಮ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದರು.
ಆನ್‌ಲೈನ್ ಉಪಕ್ರಮವನ್ನು ಪ್ರಾರಂಭಿಸಿದ ಸಿಎಂ ಯಡಿಯೂರಪ್ಪ, ‘ಕಳೆದ ವರ್ಷ ನಾವು ಸಿಇಟಿ ಮತ್ತು ನೀಟ್ ತರಬೇತಿಯತ್ತ ಮಾತ್ರ ಗಮನ ಹರಿಸಿದ್ದೇವೆ. ಆದರೆ ಈ ವರ್ಷ ನಾವು ಜೆಇಇ ಪರೀಕ್ಷೆಗಳಿಗೆ ಕೋಚಿಂಗ್ ಅನ್ನು ಸೇರಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಕೋಚಿಂಗ್ ಜೊತೆಗೆ, ವಿದ್ಯಾರ್ಥಿಗಳು ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್ಎಂಎಸ್) ಸೌಲಭ್ಯವನ್ನು ಸಹ ಪಡೆಯಬಹುದು ಎಂದು ಹೇಳಿದರು.
ಉಪಕ್ರಮವನ್ನು ವಿವರಿಸಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್, ಮುಂಬರುವ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗೆಟ್‌ಸೆಟ್‌ಗೋ ಆನ್‌ಲೈನ್ ಕೋಚಿಂಗ್ ವರ್ಷಪೂರ್ತಿ ಲಭ್ಯವಾಗಲಿದೆ. ಕರ್ನಾಟಕದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಐಐಟಿ ಪ್ರವೇಶಿಸಲು ಸಹಾಯ ಮಾಡುವ ಉದ್ದೇಶದಿಂದ ನಾವು ಈ ಹೆಜ್ಜೆ ಇಡುತ್ತಿದ್ದೇವೆ. ಇದು ಖಂಡಿತವಾಗಿಯೂ ಕರ್ನಾಟಕದ ವಿದ್ಯಾರ್ಥಿಗಳಿಗೆ ಜೆಇಇ ಮತ್ತು ನೀಟ್ ಪರೀಕ್ಷೆಗಳಲ್ಲಿ ಹೆಚ್ಚಿನ ಶ್ರೇಯಾಂಕಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ತಿನ್ನುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು https://t.co/ebHn79UbYs
— Saaksha TV (@SaakshaTv) March 19, 2021
ಐಟಿಆರ್ ಮರುಪಾವತಿ ಭರ್ತಿ ಮಾಡಿದ ನಂತರ ಈ ಅಂಶಗಳನ್ನು ಪರಿಶೀಲಿಸಿ https://t.co/tsMNkVA0BK
— Saaksha TV (@SaakshaTv) March 19, 2021
ನಾನು ರಾಮ ಮತ್ತು ಕೃಷ್ಣನನ್ನು ನಂಬುವುದಿಲ್ಲ.. ಯಾವುದೇ ಹಿಂದೂ ದೇವರನ್ನು ಪೂಜಿಸುವುದಿಲ್ಲ – ಐಪಿಎಸ್ ಅಧಿಕಾರಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣವಚನ https://t.co/Ts767i1Wrv
— Saaksha TV (@SaakshaTv) March 19, 2021
ದೊಣ್ಣೆ ಮೆಣಸಿನ ವಾಂಗಿಬಾತ್ https://t.co/AL3rMRyFF5
— Saaksha TV (@SaakshaTv) March 19, 2021