ಔಷಧಕ್ಕಾಗಿ ಬಳಸಲಾಗುವ ಕಾಸರಕದ ಅನೇಕ ವಿಶೇಷತೆಗಳು..!

1 min read

ಔಷಧಕ್ಕಾಗಿ ಬಳಸಲಾಗುವ ಕಾಸರಕದ ಅನೇಕ ವಿಶೇಷತೆಗಳು..!

ಕಾಸರಕ… ದಕ್ಷಿಣ ಏಷಿಯಾದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವಿಶಿಷ್ಟ ಪರ್ಣಪಾತಿ ಮರ ಲೊಗನಿಯಸಿಯೆ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು. ಕನ್ನಡದಲ್ಲಿ ಇದನ್ನು ನಂಜಿನಕೊರಡು, ಕಾತರಿಕೆ, ವಿಷಮುಷ್ಟಿ ಎಂದು ಕರೆದರೆ ತುಳುವಿನಲ್ಲಿ ಕಾಯೆರ್ ಎಂದು ಕರೆಯುತ್ತಾರೆ. ಇನ್ನು ದೇವಭಾಷೆ ಸಂಸ್ಕೃತದಲ್ಲ ಇದನ್ನು ಕಾರಸ್ಕರ ಎಂದು ಕರೆಯುತ್ತಾರೆ. ಸ್ಟ್ರಿಕ್ನೋಸ್ ಸಸ್ಯಕುಲದಲ್ಲಿ ಸ್ಟ್ರಿಕ್ನೋಸ್ ನಕ್ಸ್-ವೊಮಿಕ ಎಂದು ಕರೆಯಲ್ಪಡುತ್ತದೆ.

ಇದೊಂದು ಸಣ್ಣ ಜಾತಿಯ ಮರ. ಇದರ ಎಲೆಗಳು ನುಣುಪಾದ ಮೇಲ್ಮೈ ಹೊಂದಿರುತ್ತದೆ. ಇದರ ಹಣ್ಣುಗಳ ಬಣ್ಣ ಕೇಸರಿ. ಹಣ್ಣಿನಲ್ಲಿ ವಿಷದ ಅಂಶಗಳಿರುತ್ತವೆ. ಈ ಹಣ್ಣುಗಳ ಬೀಜದಿಂದ ಸ್ಟ್ರಿಕ್ನಿನ್ ಮತ್ತು ಬ್ರೂಸಿನ್ ಎಂಬ ಅಂಶಗಳನ್ನು ಬೇರ್ಪಡಿಸಿ ಬಳಸುತ್ತಾರೆ. ಹಳ್ಳಿಗಳಲ್ಲಿ ಇದನ್ನು ನಂಜುನಿವಾರಕವಾಗಿ ಬಳಸುತ್ತಾರೆ.

ಇದರ ಎಲೆ, ತೊಗಟೆ, ತಿರುಳು, ಹಣ್ಣು ಎಲ್ಲವನ್ನೂ ಔಷಧಕ್ಕಾಗಿ ಬಳಸಲಾಗುತ್ತದೆ. ಈ ಕಾಸರಕವನ್ನು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಹೃದಯ ಸಂಬಂಧಿ ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಇದು ಅತ್ಯಂತ ಕಹಿ ರುಚಿಯನ್ನು ಹೊಂದಿರುವ ಕಾರಣ ದೇಹದಲ್ಲಿ ನಂಜಿನಂಶ ಹೆಚ್ಚಾದರೆ, ಭಾರತದ ಗ್ರಾಮೀಣ ಭಾಗದ ನಾಟೀ ವೈದ್ಯರು ಇದರ ಬೇರು ಮತ್ತು ಎಲೆಗಳನ್ನು ಉಪಯೋಗಿಸಿ ಚೂರ್ಣ ತಯಾರಿಸಿ ನಂಜು ನಿವಾರಕವನ್ನಾಗಿ ನೀಡುತ್ತಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd