ಪ್ರಸಕ್ತ ಸಾಲಿನ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ನಡೆದಿದ್ದು, ಕನ್ನಡದ ಎರಡು ಚಿತ್ರಗಳು ಒಟ್ಟು 10 ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅಭಿನಯಿಸಿದ್ದ ಕಾಟೇರ ಚಿತ್ರವು ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕಾಟೇರ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯೂ ಲಭಿಸಿದೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಹರಿಕೃಷ್ಣ ಪಾಲಾಗಿದೆ. ಬೆಸ್ಟ್ ಡೆಬ್ಯೂ ಆಕ್ಟ್ರೆಸ್ ಅವಾರ್ಡ್ ಆರಾಧನಾ ಪಾಲಾಗಿದೆ.
‘ಪಸಂದಾಗವ್ನೇ..’ ಹಾಡನ್ನು ಹಾಡಿದ ಮಂಗ್ಲಿಗೆ ಅತ್ಯುತ್ತಮ ಗಾಯಕಿ ಸೈಮಾ ಅವಾರ್ಡ್ ಒಲಿದು ಬಂದಿದೆ. ಅಲ್ಲದೇ, ಕನ್ನಡದ ಸಪ್ತ ಸಾಗರದಾಚೆ ಎಲ್ಲೋ ಚಿತ್ರ 6 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಕನ್ನಡದ ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ಹಲವಾರು ನಟ- ನಟಿಯರು ಪ್ರಶಸ್ತಿ ಸಮಾರಂಭದಲ್ಲಿದ್ದಾರೆ.