ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆಯಾಗಿದ್ದು, ಬರೋಬ್ಬರಿ ನೂರು ದಿನಗಳನ್ನು ಪೂರೈಸಿದೆ. ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನಾಳೆ ಕಾಟೇರ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಯುಗಾದಿಗೂ ಎರಡು ದಿನ ಮುನ್ನ ಏಪ್ರಿಲ್ 7ರಂದು ಸಂಜೆ 7ಕ್ಕೆ ಚಿತ್ರ ಪ್ರಸಾರವಾಗಲಿದೆ. ಕಾಟೇರ ಥಿಯೇಟರ್ ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೂ ಒಟಿಟಿಯಲ್ಲೂ ಸ್ಟ್ರೀಮಿಂಗ್ ಆಗುತ್ತಿತ್ತು. ಒಟಿಟಿಯಲ್ಲಿ ಕಾಟೇರ ಪ್ರದರ್ಶನ ಕಾಣುತ್ತಿದೆ.
ಕಾಟೇರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳು ಎಬ್ಬಿಸಿತ್ತು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾವನ್ನು ಒಟಿಟಿಗೆ Zee5 ವಹಿವಾಟು ಮುಗಿಸಿತ್ತು. ‘ಕಾಟೇರ’ ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು ಸಿನಿಮಾ ಪ್ರೀಮಿಯರ್ ಬಿಡುಗಡೆಯಾಗಿದೆ.
ಈ ಚಿತ್ರ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚಿತ್ರರೂಪಕ್ಕೆ ಇಳಿಸಲಾಗಿದೆ. ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿದೆ.