ಉತ್ತರ ಪ್ರದೇಶ: ಅಂಧ ಶ್ರದ್ಧೆಯೋ, ಭಕ್ತಿಯ ಪರಾಕಾಷ್ಟೆಯೋ ದೇವಿ ಭಕ್ತನೊಬ್ಬ ತನ್ನ ನಲಿಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸಿರುವ ಘಟನೆ ಕೌಶಾಂಬಿಯ ಕಡಿಯಾ ಶಕ್ತಿಪೀಠ ಶೀತಲ ಮಾತಾ ದೇವಸ್ಥಾನದಲ್ಲಿ ನಡೆದಿದೆ. ಭಕ್ತ ನಾಲಿಗೆ ಕತ್ತರಿಸಿಕೊಂಡ ತಕ್ಷಣ ದೇವಸ್ಥಾನದಲ್ಲಿ ಸಂಚಲನ ಉಂಟಾಗಿದೆ.
ಸಂಪತ್ ಎಂಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ಕೌಶಾಂಬಿ ಜಿಲ್ಲೆಯ ಶಕ್ತಿಪೀಠ ಭೇಟಿ ನೀಡಲು ಬಂದಿದ್ದರು. ದೇವಿ ದೇವಸ್ಥಾನಕ್ಕೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದ್ದಾರೆ. ನಂತರ ಬ್ಲೇಡ್ ನಿಂದ ನಾಲಗೆ ಕತ್ತರಿಸಿಕೊಂಡು ದೇವಾಲಯದ ಚೌಕಟ್ಟಿನ ಬಳಿ ಇಟ್ಟಿದ್ದಾರೆ.
ಮಾಹಿತಿ ಪಡೆದ ತಕ್ಷಣ ಸ್ಥಳೀಯ ಪೊಲೀಸರು ಗಾಯಗೊಂಡಿದ್ದ ಭಕ್ತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನಂತರ ಭಕ್ತರನ್ನು ಕಾಡಾ ಸಿಎಸ್ಸಿಯಿಂದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.
ಘಟನೆಯ ಬಗ್ಗೆ ಸಂಪತ್ ಅವರ ಪತ್ನಿ ಬನ್ನೋ ದೇವಿ ಅವರನ್ನು ಕೇಳಿದಾಗ, ನನ್ನ ಪತಿ ನಿನ್ನೆ ರಾತ್ರಿ ಮಾತಾ ಶೀಟ್ಲದ ದರ್ಶನ ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು, ಇಂದು ಭೇಟಿ ನೀಡಲು ಬಂದಾಗ ಇದ್ದಕ್ಕಿದ್ದಂತೆ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.








