ಮದ್ಯನೀತಿ ಹಗರಣದಲ್ಲಿ ಇಡಿ ವಶದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಮತ್ತೊಂದು ಸರ್ಕಾರಿ ಆದೇಶ ಹೊರಡಿಸಿದ್ದಾರೆ.
ಕಳೆದ ಬಾರಿ ಜಲಮಂಡಳಿಗೆ ಸಂಬಂಧಿಸಿದಂತ ಆದೇಶ ಪ್ರಕಟಿಸಿದ್ದ ಅವರು, ಈಗ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಆದೇಶ ಹೊರಡಿಸಿದ್ದಾರೆ. ಮಾರ್ಚ್ 24 ರಂದು ಇಡಿ ಕಸ್ಟಡಿಯಿಂದ ಮೊದಲ ಆದೇಶ ಹೊರಡಿಸಿದ್ದರು.
ಕೇಜ್ರಿವಾಲ್ ಎಲ್ಲಿಯೇ ಇದ್ದರೂ ದೆಹಲಿ ಜನರ ಸೇವೆ ಮುಂದುವರೆಸುತ್ತಾರೆ. ಜೈಲಿಗೆ ಹೋದರೆ ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ ಎಂದು ಅಶಿತಿ ಹೇಳಿದ್ದರು. ಈಗ ಎರಡನೇ ಆದೇಶ ಹೊರಡಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಡಿ ದೆಹಲಿ ಸಿಎಂ ಅವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್ 21 ರಂದು ಬಂಧಿಸಿದೆ. ಜೈಲಿಗೆ ಹೋದರೂ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಸದ್ಯ ಜೈಲಿನಿಂದಲೇ ಅವರು ಸರ್ಕಾರ ನಡೆಸುತ್ತಿದ್ದಾರೆ.