ರಾಷ್ಟ್ರಧ್ವಜವನ್ನ ಉಲ್ಟಾ ಹಾರಿಸಿ ಸೆಲ್ಯೂಟ್ ಮಾಡಿದ ಕೇರಳ ಸಚಿವ
ಕೇರಳದ ಸಚಿವರೊಬ್ಬರ ಗಣರಾಜ್ಯೋತ್ಸವದ ಪ್ರಯುಕ್ತ ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ್ದು, ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕಾಗಿ ಪ್ರತಿಪಕ್ಷಗಳು ರಾಜೀನಾಮೆಗೆ ಪಟ್ಟು ಹಿಡಿದಿವೆ.
ಪಿಣರಾಯಿ ವಿಜಯನ್ ಸರ್ಕಾರದಲ್ಲಿ ಬಂದರು ಮತ್ತು ಪುರಾತತ್ವ ಇಲಾಖೆ ಖಾತೆಯನ್ನು ವಹಿಸಿಕೊಂಡಿರುವ ಸಚಿವ ಅಹಮ್ಮದ್ ದೇವರಕೋವಿಲ್ ಇಂದು ಬೆಳಿಗ್ಗೆ ಕೇರಳದ ಕಾಸರಗೋಡಿನ ಮುನ್ಸಿಪಲ್ ಸ್ಟೇಡಿಯಂನಲ್ಲ ಧ್ವಜಾರೋಹಣ ನೆರವೇರಿಸುವಾಗ ಧ್ವಜವನ್ನ ಉಲ್ಟಾ ಹಾರಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಚಿವರು, ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಗಣ್ಯರು ಹಾಜರಿದ್ದರು ಯಾರೂ ಸಹ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದನ್ನು ಗಮನಿಸಲಿಲ್ಲ.ತಲೆಕೆಳಗಾಗಿ ಹಾರುತ್ತಿದ್ದ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ ಸಚಿವರು ತಮ್ಮ ಭಾಷಣಕ್ಕೆ ಮುಂದಾದಾಗ ಕೆಲವು ಮಾಧ್ಯಮದವರು ರಾಷ್ಟ್ರಧ್ವಜಕ್ಕೆ ಆದ ಅವಮಾನವನ್ನು ಗಮನಿಸಿ ತಿಳಿಸಿದ್ದಾರೆ. ನಂತರ ತಪ್ಪನ್ನ ಸರಿಪಡಿಸಿಕೊಂಡು ರಾಷ್ಟ್ರ ಧ್ವಜವನ್ನು ಕೆಳಗಿಳಿಸಿ ಮತ್ತೆ ಸರಿಯಾಗಿ ಹಾರಿಸಿದರು.
ಈ ಘಟನೆಯ ವಿಡಿಯೋ ವೈರಲ್ ಭಾರೀ ವಿವಾದಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್ ಅವರು ಸಚಿವ ದೇವರಕೋವಿಲ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಘಟನೆಗೆ ಸಂಬಂಧಿದಂತೆ ಅಧಿಕಾರಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ..