KGF ಅಬ್ಬರಕ್ಕೆ ಜಕ್ಕನ್ನ ಶೇಕ್.. ಸೆಟ್ಟೆರಲಿದೆ ಬಾಹುಬಲಿ 3
ಪ್ಯಾನ್ ಇಂಡಿಯಾ ಸಿನಿಮಾಗಳು ಬೇರೆ, ಪ್ಯಾನ್ ಇಂಡಿಯಾ ಸೀಕ್ವೆಲ್ ಗಳು ಬೇರೆ. ಪ್ಯಾನ್ ಇಂಡಿಯಾ ಸಿನಿಮಾ ಹಿಟ್ ಆಗಿದ್ದರೆ ಆ ಸಿನಿಮಾದ ಸೀಕ್ವೆಲ್ ಗೆ ಕ್ರೇಜ್ ಬೇರೆ ಲೆವೆಲ್ ನಲ್ಲಿರುತ್ತದೆ.
ಈ ಹಿಂದೆ ಬಾಹುಬಲಿ 2, ಈಗ ಕೆಜಿಎಫ್ 2.. ಈ ಟ್ರೆಂಡ್ ನೋಡಿದರೆ ಮುಂದೆ ಪುಷ್ಪ ಕೂಡ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸೋದು ಪಕ್ಕಾ.
ಕೆಜಿಎಫ್ 2 ಸಿನಿಮಾದ ಕ್ರೇಜ್, ಕೆಲಕ್ಷನ್ ರೆಕಾರ್ಡ್ಸ್ ಪುಷ್ಪ ಚಿತ್ರತಂಡದಲ್ಲಿ ಭಾರಿ ಜೋಷ್ ತುಂಬಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಒಂದು ಕ್ರೇಜ್ ಇದ್ದರೆ ಪ್ಯಾನ್ ಇಂಡಿಯಾ ಚಿತ್ರಗಳ ಸೀಕ್ವೆಲ್ ಗಳಿಗೆ ದೊಡ್ಡ ಮಟ್ಟದ ಕ್ರೇಜ್ ಇದೆ. ಬಾಹುಬಲಿ 2 ಮೂಲಕ ಅದು ಸಾಭೀತಾಗಿತ್ತು.
ಈಗ ಮತ್ತೊಮ್ಮೆ ಕೆಜಿಎಫ್ 2 ಸಿನಿಮಾ ಮೂಲಕ ಸೀಕ್ವೆಲ್ ಗಳಿಗೆ ಇರುವ ಕ್ರೇಜ್ ರುಜುವಾಗಿದೆ. ಬಾಹುಬಲಿ 2, ಕೆಜಿಎಫ್ 2 ರಿಲೀಸ್ ನಂತರ ಆ ರೀತಿಯ ಕ್ರೇಜ್ ಇರೋದು ಪುಷ್ಪ ಸಿನಿಮಾಗೆ ಮಾತ್ರ.
ಅದಕ್ಕೆ ತಕ್ಕಂತೆ ಪುಷ್ಪ ಪಾರ್ಟ್ 2 ಅನ್ನು ಸುಕುಮಾರ್ ತೆರೆಗೆ ತರಲು ಸಾಧ್ಯವಾದರೆ ಟಾಲಿವುಡ್ ಮತ್ತೊಂದು ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಪಡೆಯುವುದು ಖಚಿತ.
ಮತ್ತೊಂದೆಡೆ, 1,000 ಕೋಟಿ ರೂಪಾಯಿಗಳ ಆರ್ಆರ್ಆರ್ ಸೀಕ್ವೆಲ್ ಬಗ್ಗೆ ರಾಜಮೌಳಿ ಮೌನವಾಗಿದ್ದಾರೆ, ಆದರೆ ಭವಿಷ್ಯದಲ್ಲಿ ಬಾಹುಬಲಿ 3 ಅನ್ನು ಸೆಟ್ಟೇರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆ ಮೂಲಕ 2000 ಕೋಟಿಯ ಗಡಿದಾಟಲು ರಾಜಮೌಳಿ ಪ್ಲಾನ್ ಮಾಡುತ್ತಿದ್ದಾರೆ. kgf-2-success-rajamouli-thinking-baahubali-3