ಪಾಪಿಗಳು ಮನೆಯ ಮೇಲೆ ದರೋಡೆ ಮಾಡಿದ್ದಲ್ಲದೇ, ಕೆಲಸದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆಯೊಂದು ನಡೆದಿದೆ.
ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಐವರು ಸೆಕ್ಯುರಿಟಿ ಗಾರ್ಡ್ಗಳನ್ನು ಪೊಲೀಸರು ಬಂಧಿಸಲಾಗಿದೆ. ಅಹಮದಾಬಾದ್ನ ಶಿಲಾಜ್ನಲ್ಲಿ ಈ ಘಟನೆ ನಡೆದಿದೆ. ಆರೋಪಿಗಳು ಮಹಿಳೆಯ ಕಾರು ಮತ್ತು ಆಕೆಯ ಎಟಿಎಂ ಕಾರ್ಡ್ನೊಂದಿಗೆ ಸ್ಥಳದಿಂದ ಪರಾರಿಯಾಗಿ, ಪಂಜಾಬ್ ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಂಜೀತ್ ಸಿಂಗ್ ಎಂಬಾತ ಮದುವೆಯಾಗಲು ಸಿದ್ಧತೆ ನಡೆಸಿದ್ದ. ಹೀಗಾಗಿ ಆತ ಕಳ್ಳತನಕ್ಕೆ ಮುಂದಾಗಿದ್ದ ಎನ್ನಲಾಗಿದೆ. ಮಹಿಳೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಕಾರಣ, ಆರೋಪಿಗಳು ಆಕೆಯನ್ನೇ ಟಾರ್ಗೆಟ್ ಮಾಡಿದ್ದರು. ದರೋಡೆ ಮಾಡಲು ಆನ್ಲೈನ್ನಲ್ಲಿ ನಕಲಿ ಗನ್ ಆರ್ಡರ್ ಮಾಡಿದ್ದಾರೆ. ದರೋಡೆ ಮಾಡಲು ಹೋದಾಗ ಮಹಿಳೆಯ ಮನೆಗೆ ಕರೆಂಟ್ ಆಫ್ ಮಾಡಿದ್ದಾರೆ. ನಂತರ ಮನೆಗೆ ನುಗ್ಗಿದ ಸೆಕ್ಯೂರಿಟಿ ಗಾರ್ಡ್ ಗಳು, ಮಹಿಳೆಯ ಬಾಯಿ ಮುಚ್ಚಿದ್ದಾರೆ. ಆಗ ಮನೆಯಲ್ಲಿದ್ದ 19 ವರ್ಷದ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕಾರು, ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.